ಪುಲ್ವಾಮಾ ದಾಳಿ: ಟ್ರೋಲಿಗರಿಗೆ ಸಾನಿಯಾ ಮಿರ್ಜಾ ತಿರುಗೇಟು!

ಜಮ್ಮು-ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿ ಕುರಿತು ಆರಂಭದಲ್ಲಿ ಮೌನಿಯಾಗಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ
ಹೈದರಾಬಾದ್: ಜಮ್ಮು-ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿ ಕುರಿತು ಆರಂಭದಲ್ಲಿ ಮೌನಿಯಾಗಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
ಸಾನಿಯಾ ಮಿರ್ಜಾ ಟ್ವೀಟ್ ಮಾಡಿ ಫೆ.14 ಭಾರತಕ್ಕೆ ಕರಾಳ ದಿನ ಎಂದಿದ್ದಾರೆ. ಆದರೆ ಸಾನಿಯಾ ಸುದೀರ್ಘ ಟ್ವೀಟ್ ನಲ್ಲಿ ಪಾಕ್ ಪ್ರಚೋದಿತ ಭಯೋತ್ಪದಾನೆ ಕುರಿತು ಒಂದು ಮಾತು ಎತ್ತಿಲ್ಲ ಅನ್ನೋದನ್ನು ಟ್ವೀಟರಿಗರು ಸೂಚಿಸಿದ್ದಾರೆ.
ಪುಲ್ವಾಮಾ ದಾಳಿಯನ್ನು ಖಂಡಿಸದ ಸಾನಿಯಾ ಮಿರ್ಜಾ ವಿರುದ್ಧ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಸಾನಿಯಾ ಸುದೀರ್ಘ ಟ್ವೀಟ್ ಮಾಡಿದ್ದಾರೆ. ಸೆಲೆಬ್ರೆಟಿಗಳು ಯಾವುದೇ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸದ ತಕ್ಷಣ ನಾವು ದೇಶಭಕ್ತ ಅಲ್ಲ ಅನ್ನೋದನ್ನ ಸಾಮಾಜಿಕ ಜಾಲತಾಣದಲ್ಲಿ ಹರಡುವ ಪ್ರಯತ್ನ ನಡೆಯುತ್ತಿದೆ. ಕೆಲವರು ದ್ವೇಷದ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. 
ಸಾನಿಯ ಟ್ವೀಟ್ ಬಳಿಕವೂ ಟ್ರೋಲ್ ನಿಂತಿಲ್ಲ. ಸಾನಿಯಾ ಮಿರ್ಜಾ ತಮ್ಮ ಟ್ವೀಟ್ ನಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಕುರಿತು ಯಾವುದೇ ಮಾತು ಆಡಿಲ್ಲ ಎಂದು ಮತ್ತೆ ಟ್ರೋಲ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com