ಇಂಡೊನೇಷ್ಯಾ: 23ನೇ ಪ್ರೆಸಿಡೆಂಟ್ಸ್ ಕಪ್, ಚಿನ್ನ ಗೆದ್ದ ಮೇರಿಕೋಮ್

ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಬಾಕ್ಸರ್ ಮೇರಿ ಕೋಮ್ ಇಂಡೊನೇಷ್ಯಾದಲ್ಲಿ ಇಂದು ನಡೆದ 23ನೇ ಫ್ರೆಸಿಡೆಂಟ್ಸ್ ಕಪ್ ನ ಫೈನಲ್ ಪಂದ್ಯದಲ್ಲಿ ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

Published: 28th July 2019 12:00 PM  |   Last Updated: 31st July 2019 01:25 AM   |  A+A-


Mary Kom

ಮೇರಿಕೋಮ್

Posted By : ABN ABN
Source : The New Indian Express
ನವದೆಹಲಿ: ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಬಾಕ್ಸರ್ ಮೇರಿ ಕೋಮ್ ಇಂಡೊನೇಷ್ಯಾದಲ್ಲಿ ಇಂದು ನಡೆದ 23ನೇ ಫ್ರೆಸಿಡೆಂಟ್ಸ್ ಕಪ್ ನ ಫೈನಲ್ ಪಂದ್ಯದಲ್ಲಿ ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

51 ಕೆಜಿ ವಿಭಾಗದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್  ಕಂಚಿನ ಪದಕ ವಿಜೇತೆ ಮೇರಿ ಕೋಮ್ ಆಸ್ಟ್ರೇಲಿಯಾದ ಏಪ್ರಿಲ್ ಫ್ರಾಂಕ್ಸ್ ಅವರನ್ನು 5-0 ಅಂತರದಿಂದ ಮಣಿಸಿದ್ದಾರೆ.

36 ವಯಸ್ಸಿನ ಮೇರಿಕೋಮ್ ಕಳೆದ ಮೇ ತಿಂಗಳಲ್ಲಿ ನಡೆದ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲೂ ಚಿನ್ನದ ಪದಕ ಗೆದ್ದಿದ್ದರು. ಆದರೆ,  ಮೇ ತಿಂಗಳಲ್ಲಿ ಥಾಯ್ಲೆಂಡ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ ನಿಂದ ಹಿಂದೆ ಸರಿದಿದ್ದರು. 

ಕಳೆದ ವರ್ಷ ದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಆರನೇ ಬಾರಿಗೆ ಚಿನ್ನದ ಪದಕ ಗೆದಿದ್ದ ಮೇರಿಕೋಮ್  2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಆರ್ಹತೆ ಪಡೆದುಕೊಳ್ಳಲು ಎದುರು ನೋಡುತ್ತಿದ್ದಾರೆ. ಇದೇ ತಿಂಗಳ ಸೆಪ್ಟೆಂಬರ್ 7 ರಿಂದ 21 ರವರೆಗೂ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp