ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿ: ಫೈನಲ್ ಗೆ ಲಗ್ಗೆ ಹಾಕಿದ ಡೊಮಿನಿಕ್ ಥೀಮ್

ಇಂದು ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು 6-2, 3-6, 7-5, 5-6, 7-5 ಅಂತರಗಳಿಂದ ಮಣಿಸಿದ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

Published: 08th June 2019 12:00 PM  |   Last Updated: 08th June 2019 08:22 AM   |  A+A-


Dominic Theiem

ಡೊಮಿನಿಕ್ ಥೀಮ್

Posted By : ABN ABN
Source : ANI
ಪ್ಯಾರಿಸ್ :   ಇಂದು ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು 6-2, 3-6, 7-5, 5-6, 7-5 ಅಂತರಗಳಿಂದ ಮಣಿಸಿದ ಆಸ್ಟ್ರಿಯಾದ ಡೊಮಿನಿಕ್ ಥೀಮ್  ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

ಫಿಲಿಪ್ ಚಾರ್ಟಿಯರ್ ಮೈದಾನದಲ್ಲಿ  ನಡೆದ ಸೆಮಿ ಫೈನಲ್ ಪಂದ್ಯದಲ್ಲಿ  ನಾಲ್ಕು ಗಂಟೆ 13 ನಿಮಿಷ ಪ್ರಬಲ  ಹೋರಾಟ ನಡೆಸಿದ ಡೊಮಿನಿಕ್ ಥೀಮ್ ಕೊನೆಗೆ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ವಿರುದ್ಧ ಡೊಮಿನಿಕ್ ಥೀಮ್ ಹೋರಾಟ ನಡೆಸಲಿದ್ದಾರೆ.

ನೂವಾಕ್ ಜೊಕೊವಿಕ್ ಹಾಗೂ ಥೀಮ್ ನಡುವೆ ನಿನ್ನೆ ನಡೆದ ಪಂದ್ಯ ಮೂರನೇ ಸೆಟ್ ನಲ್ಲಿ  ಮಳೆಯಿಂದಾಗಿ ರದ್ದುಗೊಂಡಿತ್ತು.  ಮೊದಲ ಸೆಟ್ ನಲ್ಲಿ 2-6 ಅಂತರದಿಂದ  ನಿರಾಸೆ ಅನುಭವಿಸಿದ್ದ ಜೊಕೊವಿಕ್ ಎರಡನೇ ಸೆಟ್ ನಲ್ಲಿ 6-3 ಸೆಟ್ ನಿಂದ ಗೆದಿದ್ದರು.

ಮೂರನೇ ಸೆಟ್ ನಲ್ಲಿ ಥೀಮ್ ಮುನ್ನಡೆಯಲಿದ್ದಾಗ ಪಂದ್ಯ ರದ್ದುಗೊಂಡಿತ್ತು. ಇಂದು ಮತ್ತೆ ಪಂದ್ಯ ಆರಂಭಿಸಿದಾಗ ಥೀಮ್  6-5 ಅಂತರದಿಂದ ಪಂದ್ಯವನ್ನು ಗೆದ್ದುಕೊಂಡರು.  ಜೊಕೊವಿಕ್ ಕೆಲವು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೂ ನಿರಂತರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಇದರಿಂದಾಗಿ ಥೀಮ್ ಗೆಲುವು ಸುಲಭವಾಯಿತು.

ನಾಲ್ಕನೇ ಸೆಟ್ ನಲ್ಲಿ ಜೊಕೊವಿಕ್ 4-2 ಅಂತರದಿಂದ ಮುನ್ನಡೆಯಲ್ಲಿದ್ದರು. ಆದರೆ, ಅವರನ್ನು ಹಿಂದಿಕ್ಕಿದ್ದ ಥೀಮ್,  5-4 ಸೆಟ್ ನಲ್ಲಿ ತಮ್ಮ ಪರವಾಗಿರುವಂತೆ ನೋಡಿಕೊಂಡರು.ಅಂತಿಮ ಹಾಗೂ ನಿರ್ಣಾಯಕ ಸೆಟ್ ನಲ್ಲಿ  ಉತ್ತಮ ಪ್ರದರ್ಶನ ನೀಡಿದ ಥೀಮ್,  6-2, 3-6, 7-5, 5-6, 7-5  ಅಂತರದಿಂದ ಗೆಲುವು ಸಾಧಿಸಿದರು. 

ಜೂನ್ 9 ರಂದು ಡೊಮಿನಿಕ್ ಥೀಮ್ ಹಾಗೂ ರಾಫೆಲ್ ನಡಾಲ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. 
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp