ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಇಳಕಲ್ ಯುವಕನಿಗೆ ಬಂಗಾರದ ಪದಕ

ಮಲೇಷಿಯಾದ ಫೇರಕಾ ನಗರದಲ್ಲಿ ಮೇ 5 ರಂದು ನಡೆದ 16ನೇ ಒಕಿಸಜಾ ಗುಜರೊ ಅಂತಾರಾಷ್ಟ್ರೀಯ ಒಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಇಳಕಲ್ ಯುವಕ ಬಂಗಾರ ಪದಕ ಗೆದ್ದಿದ್ದಾರೆ
ನಾಗೇಶ ತಳವಾರ
ನಾಗೇಶ ತಳವಾರ
ಇಳಕಲ್: ಮಲೇಷಿಯಾದ ಫೇರಕಾ ನಗರದಲ್ಲಿ ಮೇ 5 ರಂದು ನಡೆದ 16ನೇ ಒಕಿಸಜಾ ಗುಜರೊ ಅಂತಾರಾಷ್ಟ್ರೀಯ ಒಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಇಳಕಲ್ ಯುವಕ ಬಂಗಾರ ಪದಕ ಗೆದ್ದಿದ್ದಾರೆ
ಇಳಕಲ್ ನ ನಾಗೇಶ ತಳವಾರ 56 ಕೆಜಿ ಕುಮಟೆ ಫೈಟ್ ಕರಾಟೆ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
8 ದೇಶಗಳ 800ಕ್ಕೂಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದ ಈ ಕ್ರೀಡಾಕೂಟದಲ್ಲಿ ನಾಗೇಶ್ ಭಾರತವನ್ನು ಪ್ರತಿನಿಧಿಸಿದ್ದರು.
ಮೂಲತಃ ಕೂಡಲಸಂಗಮದವರಾದ ನಾಗೇಶ್ ಕುಟುಂಬ ಹತ್ತು ವರ್ಷದ ಹಿಂದೆ ಹೊಟ್ಟೆಪಾಡಿಗಾಗಿ ಇಳಕಲ್ ಗೆ ಬಂದು ನೆಲೆಸಿದೆ. ಬಡ ಕುಟುಂಬದ ಹಿನ್ನೆಲೆಯ ನಾಗೇಶ್ ಚಿಕ್ಕಂದಿನಿಂಡ ಕರಾಟೆ ಅಭ್ಯಾಸ ನಡೆಸಿದ್ದು 2015ರಲ್ಲಿ ಭೂತಾನ್ ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 
ಇದೀಗ ಮಹತ್ವದ ಸಾಧನೆ ಮಾಡಿದ ನಾಗೇಶ್ ಸರ್ಕಾರದಿಂಡ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಸರ್ಕಾರ ಈ ಬಡ ಕುಟುಂಬಕ್ಕೆ ಆರ್ಥಿಕ ನೆರವು, ಯುವಕನಿಗೆ ತರಬೇತಿ ವ್ಯವಸ್ಥೆ ಮಾಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com