ಪಿಬಿಎಲ್ 5ನೇ ಆವೃತ್ತಿ: ಪಿ. ವಿ. ಸಿಂಧು, ಯಿಂಗ್ 77 ಲಕ್ಷಕ್ಕೆ ಹರಾಜು!

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್ ) ನ ಐದನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ತೈ ಕ್ಸಿಯಿಂಗ್,  ಭಾರತದ ಲಕ್ಷ್ಯಸೇನ್ ಮತ್ತು ಬಿ. ಸಾಯಿ ಪ್ರಣೀತ್ ಭಾರಿ ಮೊತ್ತಕ್ಕೆ ಖರೀದಿಯಾಗಿದ್ದಾರೆ.
ಪಿ. ವಿ. ಸಿಂಧು
ಪಿ. ವಿ. ಸಿಂಧು

ನವ ದೆಹಲಿ: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್ ) ನ ಐದನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ತೈ ಕ್ಸಿಯಿಂಗ್,  ಭಾರತದ ಲಕ್ಷ್ಯಸೇನ್ ಮತ್ತು ಬಿ. ಸಾಯಿ ಪ್ರಣೀತ್ ಭಾರಿ ಮೊತ್ತಕ್ಕೆ ಖರೀದಿಯಾಗಿದ್ದಾರೆ.

ಸ್ಟಾರ್ ಮಹಿಳಾ ಆಟಗಾರ್ತಿ ಪಿ. ವಿ. ಸಿಂಧು ಅವರನ್ನು ಫ್ರಾಂಚೈಸ್ ಹೈದರಾಬಾದ್ 77 ಲಕ್ಷ ರೂಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ. ವಿ. ಸಿಂಧು ಅವರನ್ನು 77 ಲಕ್ಷ ರೂಗಳನ್ನು ನೀಡಿ ಹೈದ್ರಾಬಾದ್ ಹಂಟರ್ಸ್ ತಮ್ಮ ತಂಡದಲ್ಲಿ ಉಳಿಸಿಕೊಂಡಿದೆ. ಇದು ಆಟಗಾರನಿಗೆ ನೀಡಿದ ಗರಿಷ್ಠ ಬೆಲೆ ಕೂಡಾ ಆಗಿದೆ. ಈ ವರ್ಷ ವಿಶ್ವ ಚಾಂಪಿಯನ್ ಆದ ಸಿಂಧು ಬಳಿಕ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾರೆ. ತನ್ನ ಕೊನೆಯ ಐದು ಪಂದ್ಯಾವಳಿಗಳ ಆರಂಭಿಕ  ಸುತ್ತಿನಲ್ಲಿ ಸಿಂಧು ಹೊರ ನಡೆದಿದ್ದಾರೆ.

ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ತೈ ಕ್ಸಿಯಿಂಗ್ ಕೂಡಾ 77 ಲಕ್ಷಕ್ಕೆ ಬೆಂಗಳೂರು ರಾಪ್ಟರ್ಸ್ ತಂಡದ ಪಾಲಾಗಿದ್ದಾರೆ.ಭಾರತದ ಮತ್ತೊಬ್ಬ ಶ್ರೇಷ್ಟ ಆಟಗಾರ ಬಿ. ಸಾಯಿ ಪ್ರಣೀತ್  32  ಲಕ್ಷಕ್ಕೆ ಬೆಂಗಳೂರು ರಾಪ್ಟರ್ಸ್ ತಂಡದಲ್ಲಿಯೇ ಉಳಿದುಕೊಂಡಿದ್ದಾರೆ.

ಪುರುಷರ ಮಿಶ್ರ  ಆಟಗಾರರಾದ ಬಿ. ಸುಮೀತ್ ರೆಡ್ಡಿ  ಅವರು 11 ಲಕ್ಷಕ್ಕೆ ಚೆನ್ನೈ ಸೂಪರ್ ಸ್ಟಾರ್ಜ್ ತಂಡ, ಚಿರಾಗ್  ಶೆಟ್ಟಿ 15.50 ಲಕ್ಷಕ್ಕೆ ಪುಣೆ 7 ಆಸೆಸ್ ಪಾಲಾಗಿದ್ದಾರೆ.  ವಿಶ್ವದ ನಂಬರ್ 9 ಆಟಗಾರ್ತಿ ಅಮೆರಿಕಾದ ಬೀವಾನ್ ಜಾಂಗ್  ಅವರಿಗೆ 39 ಲಕ್ಷ ನೀಡಿ ಅವಾದೆ ವಾರಿಯರ್ಸ್ ತನ್ನ ಬಳಿಯಲ್ಲಿಯೇ ಉಳಿಸಿಕೊಂಡಿದೆ. ಗಾಯತ್ರಿ ಗೋಪಿಚಂದ್  ಚೆನ್ನೈ ಸೂಪರ್ ಸ್ಟಾರ್ಜ್, ಅಸ್ಮೀತಾ ಚಾಲಿಹಾ ಈಶಾನ್ಯ ವಾರಿಯರ್ಸ್ ತಂಡಕ್ಕೆ 3 ಲಕ್ಷಕ್ಕೆ ಖರೀದಿಯಾಗಿದ್ದಾರೆ.

ಲಂಡನ್ ಒಲಿಂಪಿಕ್ಸ್  ಕಂಚಿನ ಪದಕ ವಿಜೇತರಾದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್,  2020ರ ಟೋಕಿಯೋ ಒಲಿಂಪಿಕ್ಸ್ ಕಡೆಗೆ ಗಮನ ಹರಿಸಿದ್ದು, ಪಿಬಿಎಲ್ ನಿಂದ ಹೊರಗುಳಿದಿದ್ದಾರೆ.  ಸಾಯಿ ಪ್ರಣೀತ್, ಲಕ್ಷ್ಯಸೇನ್ ಸೇರಿದಂತೆ ಒಟ್ಟಾರೇ 154 ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com