ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‍ಶಿಪ್: ವಿನೇಶ್, ಸಾಕ್ಷಿಗೆ ಚಿನ್ನದ ಪದಕ

 ವಿನೇಶ್ ಫೋಗಟ್ (55 ಕೆ.ಜಿ) ಹಾ ಗೂ ಸಾಕ್ಷಿ ಮಲ್ಲಿಕ್ (62 ಕೆ.ಜಿ) ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‍ಶಿಪ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಚಿನ್ನದ ಪದಕ ವಿಜೇತರಾದ ವ್ಬಿನೇಶ್ ಹಾಗೂ ಸಾಕ್ಷಿ
ಚಿನ್ನದ ಪದಕ ವಿಜೇತರಾದ ವ್ಬಿನೇಶ್ ಹಾಗೂ ಸಾಕ್ಷಿ

ಜಲಾಂದರ್: ವಿನೇಶ್ ಫೋಗಟ್ (55 ಕೆ.ಜಿ) ಹಾ ಗೂ ಸಾಕ್ಷಿ ಮಲ್ಲಿಕ್ (62 ಕೆ.ಜಿ) ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‍ಶಿಪ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

68 ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಹರಿಯಾಣದ ಕುಸ್ತಿಪಟು ಅನಿತಾ ಶೆರನ್ ಅವರು ಕಾಮನ್‍ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಹಾಗೂ ರೈಲ್ವೇಸ್ ನ ದಿವ್ಯಾ ಕಕ್ರಾನ್ ವಿರುದ್ಧ ಗೆದ್ದು ಸ್ವರ್ಣ ಪದಕ ಗೆದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದರು.

38ರ ಪ್ರಾಯದ ಅನಿತಾ ಅವರು ಕಳೆದ ವರ್ಷ 65 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಇದೀಗ ಅಂಗಳಕ್ಕೆ ಮರಳಿ ಚಿನ್ನದ ಪದಕ ಗೆಲ್ಲುವ ಮೂಲಕ ನೆರೆದಿದ್ದವರಿಗೆ ಶಾಕ್ ನೀಡಿದರು. ಕಳೆದ ಆರು ವರ್ಷಗಳ ಬಳಿಕ ಕುಸ್ತಿಗೆ ಮರಳಿದ ಪಂಜಾಬ್‍ನ ಗುರುಶರಣ್ ಕೌರ್ ಅವರೊಂದಿಗೆ ಅನಿತಾ ಸೇರ್ಪಡೆಯಾದರು.

ರೈಲ್ವೆ ಪ್ರತಿನಿಧಿಸುತ್ತಿರುವ ವಿನೇಶ್ ಮತ್ತು ಸಾಕ್ಷಿ ತಮ್ಮ ಅಂತಿಮ ಪಂದ್ಯಗಳಲ್ಲಿ ನಿರ್ತೀಕ್ಷಿತ ಗೆಲುವುಗಳನ್ನು ದಾಖಲಿಸಿದ್ದಾರೆ.55 ಕೆಜಿ ವಿಭಾಗದಲ್ಲಿ 20 ವರ್ಷದ ಹರಿಯಾಣದ ಅಂಜು ಅವರನ್ನು 7-3 ಅಂಕಗಳಿಂದ ಸೋಲಿಸಿ ನ್ಯಾಷನಲ್ಸ್‌ನಲ್ಲಿ ಸತತ ಎರಡನೇ ಚಿನ್ನ ಗೆದ್ದ ಸಾಧನೆ ವಿನೇಶ್ ಮಾಡಿದ್ದಾರೆ. ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ  ತನ್ನ ಎದುರಾಳಿ ಹರಿಯಾಣದ ರಾಧಿಕಾ  ಅವರ ವಿರುದ್ಧ  4-2 ಅಂತರದ ಜಯ ದಾಖಲಿಸಿದರು.

ಇನ್ನೊಂದೆಡೆ ಚಂಡೀಗರ್  ಕುಸ್ತಿಪಟು ನೀತು 57 ಕೆಜಿ ವಿಭಾಗದಲ್ಲಿ ಅನುಭವಿ ಕ್ರೀಡಾಪಟು ಸರಿತಾ ಮೊರ್ ವಿರುದ್ಧ ಸೋತ ನಂತರ ಬೆಳ್ಳಿಗೆತೃಪ್ತಿಪಟ್ಟರು.65 ಕೆಜಿ ಫೈನಲ್‌ನಲ್ಲಿ, ಹರಿಯಾಣದ ನಿಶಾ ರೈಲ್ವೆಯ ನವಜೋತ್‌ರನ್ನು 4-1 ಅಂತರದಿಂದ ಸೋಲಿಸಿದರು, 

ಹರಿಯಾಣದ ಮಹಿಳಾ ಕುಸ್ತಿಪಟುಗಳು ಒಟ್ಟು 215 ಅಂಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com