ಅಜರುದ್ದೀನ್ ಪುತ್ರ ಅಸದ್ ಜೊತೆ ಸಾನಿಯಾ ತಂಗಿ 2ನೇ ವಿವಾಹ  

ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಅಸಾದುದ್ದೀನ್‍ರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. 

Published: 08th October 2019 12:39 PM  |   Last Updated: 08th October 2019 12:39 PM   |  A+A-

Sania Mirza’s sister Anam

ಸಾನಿಯಾ ಮಿರ್ಜಾ ಮತ್ತು ಅನಮ್ ಮಿರ್ಜಾ

Posted By : Shilpa D
Source : Online Desk

ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಅಸಾದುದ್ದೀನ್‍ರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. 

ಸದ್ಯ ಈ ಇಬ್ಬರು ಮದುವೆಯ ಸಿದ್ಧತೆಯಲ್ಲಿದ್ದು, ಡಿಸೆಂಬರ್ ನಲ್ಲಿ ಮದುವೆ ನಡೆಯಲಿದೆ. ಈ ಬಗ್ಗೆ ಇದ್ದ ಸುದ್ದಿಗಳನ್ನು ಸಾನಿಯಾ ಮಿರ್ಜಾ ಖಚಿತಪಡಿಸಿದ್ದಾರೆ. ಆನಮ್ ಮತ್ತು ಅಸದ್ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಾನಿಯಾ ಸಹೋದರಿ ಆನಮ್ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಆನಮ್ ಸುಂದರ ಯುವಕನನ್ನು ಮದುವೆಯಾಗುತ್ತಿದ್ದಾಳೆ. ಅವನ ಹೆಸರು ಅಸದ್. ಮತ್ತು ಅವನು ಮೊಹಮ್ಮದ್ ಅಜರುದ್ದೀನ್ ಮಗ. ನಾವು ತುಂಬಾ ಖುಷಿಯಾಗಿದ್ದೇವೆ ಎಂದು ಸಾನಿಯಾ ಪೋಸ್ಟ್ ಮಾಡಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp