ವುಶು ವಿಶ್ವ ಚಾಂಪಿಯನ್‌ಶಿಪ್: ಪ್ರವೀಣ್ ಕುಮಾರ್ ಗೆ ಚಾಂಪಿಯನ್ ಪಟ್ಟ

ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ವುಶು ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತೀಯ ಕ್ರೀಡಾಪಟು ಪ್ರವೀಣ್ ಕುಮಾರ್ ಚಿನ್ನದ ಪದಕ ಗಳಿಸಿದ್ದಾರೆ. 
ವುಶು ವಿಶ್ವ ಚಾಂಪಿಯನ್‌ಶಿಪ್: ಪ್ರವೀಣ್ ಕುಮಾರ್ ಗೆ ಚಾಂಪಿಯನ್ ಪಟ್ಟ
ವುಶು ವಿಶ್ವ ಚಾಂಪಿಯನ್‌ಶಿಪ್: ಪ್ರವೀಣ್ ಕುಮಾರ್ ಗೆ ಚಾಂಪಿಯನ್ ಪಟ್ಟ

ಶಾಂಘೈ: ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ವುಶು ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತೀಯ ಕ್ರೀಡಾಪಟು ಪ್ರವೀಣ್ ಕುಮಾರ್ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಪುರುಷರ ವಿಭಾಗದಲ್ಲಿ ಇಂತಹಾ ಸಾಧನೆ ಮಾಡಿರುವ ಪ್ರಥಮ ಭಾರತೀಯರೆಂಬ ಕೀರ್ತಿಗೆ ಪ್ರವೀಣ್ ಭಾಜನರಾಗಿದ್ದಾರೆ.

48 ಕೆಜಿ ವಿಭಾಗದಲ್ಲಿ ಫಿಲಿಪೈನ್ಸ್‌ನ ರಸೆಲ್ ಡಯಾಜ್ ಅವರನ್ನು ಮಣಿಸಿ ಪ್ರವೀಣ್ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ. 

15ನೇ ವುಶು ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸ್ಯಾಂಡಾ ಸ್ಪರ್ಧೆಯಲ್ಲಿ ಭಾರತೀಯ ಆಟಗಾರ ತನ್ನ ಫಿಲಿಪೈನ್ಸ್‌ನ ಎದುರಾಳಿಯನ್ನು  2-1 ಅಂತರದಲ್ಲಿ ಪರಾಭವಗೊಳಿಸಿದ್ದರು. ಇದಕ್ಕೆ ಮುನ್ನ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಪ್ರವೀಣ್ಉಜ್ಬೇಕಿಸ್ತಾನ್‌ನ ಖಾಸನ್ ಇಕ್ರೊಮೊವ್ ಅವರನ್ನು 2-0  ಅಂತರದಲ್ಲಿ ಮಣಿಸಿ ಅಂತಿಮ ಸುತ್ತು ಪ್ರವೇಶಿಸಿದ್ದರು.

2017 ರಲ್ಲಿ, ಮಹಿಳೆಯರ 75 ಕೆಜಿ ಸ್ಯಾಂಡಾ ಸ್ಪರ್ಧೆಯಲ್ಲಿ ರಷ್ಯಾದ ಎವ್ಗೆನಿಯಾ ಸ್ಟೆಪನೋವಾ ಅವರನ್ನು ಸೋಲಿಸಿದ ನಂತರ ಪೂಜಾ ಕಡಿಯನ್ ವುಶು ವಿಶ್ವ ಚಾಂಪಿಯನ್ ಪಟ್ಟಅಲಂಕರಿಸುವ ಮೂಲಕ ಆ ಸಾಧನೆಗೈದ ಮೊದಲ ಭಾರತೀಯಳೆಂಬ ಪ್ರಖ್ಯಾತಿ ಗಳಿಸಿದ್ದರು.

ವುಶು ಒಂದು ಸಮರಕಲೆಯಾಗಿದ್ದು ಇದು ಬಹುತೇಕ ಕಿಕ್‌ಬಾಕ್ಸಿಂಗ್ ನಂತಹಾ ಕ್ರೀಡೆಯನ್ನು ಹೋಲುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com