ರೋಜರ್ ಫೆಡರರ್ ಗೆ 10ನೇ ಸ್ವಿಸ್ ಓಪನ್ ಗರಿ

ಸ್ವಿಜರ್ ಲೆಂಡ್  ಟೆನಿಸ್ ದಂತಕತೆ ರೋಜರ್ ಫೆಡರರ್ ಅವರು ಫೈನಲ್ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನಾರ್ ಅವರನ್ನು ಮಣಿಸಿ ವೃತ್ತಿ ಜೀವನದ 10ನೇ ಸ್ವಿಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ರೋಜರ್ ಫೆಡರರ್ ಗೆ 10ನೇ ಸ್ವಿಸ್ ಓಪನ್ ಗರಿ
ರೋಜರ್ ಫೆಡರರ್ ಗೆ 10ನೇ ಸ್ವಿಸ್ ಓಪನ್ ಗರಿ

ಬಸೆಲ್: ಸ್ವಿಜರ್ ಲೆಂಡ್  ಟೆನಿಸ್ ದಂತಕತೆ ರೋಜರ್ ಫೆಡರರ್ ಅವರು ಫೈನಲ್ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನಾರ್ ಅವರನ್ನು ಮಣಿಸಿ ವೃತ್ತಿ ಜೀವನದ 10ನೇ ಸ್ವಿಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ವಿಶ್ವದ ಮೂರನೇ ಶ್ರೇಯಾಂಕಿತ 6-2, 6-2 ನೇರ ಸೆಟ್ ಗಳಲ್ಲಿ ಆಸ್ಟ್ರೇಲಿಯಾ ಆಟಗಾರನ ವಿರುದ್ಧ ಗೆದ್ದು ವೃತ್ತಿ ಜೀವನದ 103ನೇ ಸಿಂಗಲ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡರು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ನಾಲ್ಕನೇ ಪ್ರಶಸ್ತಿ ತನ್ನದಾಗಿಸಿಕೊಂಡರು. ತವರು ಅಭಿಮಾನಿಗಳ ಎದುರು ಕಣಕ್ಕೆ ಇಳಿದ ರೋಜರ್ ಫೆಡರರ್ ಅವರು 20ರ ಪ್ರಾಯದ ಆಟಗಾರನ ಎದುರು ಆಕ್ರಮಣಕಾರಿ ಪ್ರದರ್ಶನ ತೋರಿದರು. 20 ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತನ ಆಟಗಾರ ಆಟ ನೆರೆದಿದ್ದ ಸಾವಿರಾರು ಅಭಿಮಾನಿಗಳ ಪ್ರೀತಿಗೆ ಭಾಜನರಾದರು. 

ಪಂದ್ಯಗಳ ಎರಡೂ ಸೆಟ್ ಗಳಲ್ಲಿ ರೋಜರ್ ಫೆಡರರ್ ಅವರು ಸುಲಭವಾಗಿ ಆಸ್ಟ್ರೇಲಿಯಾ ಯುವಕನನ್ನು ಮಣಿಸಿದರು. ಪಂದ್ಯದ ಬಳಿಕ ಮಾತನಾಡಿದ ಫೆಡರರ್, ಪಂದ್ಯ ವೇಗವಾಗಿ ಮುಗಿಸಿದ್ದು, ಅತ್ಯುತ್ತಮವಾದ ಅನುಭವ ನೀಡಿದೆ. ಇದೊಂದು ಅದ್ಭುತ ಪಂದ್ಯ. ಮೊದಲ ಐದು ಗೇಮ್ ಗಳು ಕಠಿಣವಾಗಿತ್ತು. ನಾವಿಬ್ಬರೂ ಅಮೋಘ ರ್ಯಾಲಿಗಳನ್ನು ಮುಗಿಸಿದ್ದೇವೆ ಎಂದು ಹೇಳಿದರು.

ಆಸ್ಟ್ರೇಲಿಯಾ ಅಲೆಕ್ಸ್ ಪಾಲಿಗೆ ಈ ಟೂರ್ನಿ ಅದ್ಭುತವಾಗಿತ್ತು. ನನಗೆ ಅನಿಸಿದ ಹಾಗೇ ನಾವಿಬ್ಬರೂ ಖುಷಿಯಾಗಿದ್ದೇವೆ. ತವರು ನೆಲವಾದ ಬಸೆಲ್ ನಲ್ಲಿ 10ನೇ ಪ್ರಶಸ್ತಿ ಗೆದ್ದಿರುವುದು ಅತ್ಯಂತ ಹೆಚ್ಚು ಖುಷಿ ನೀಡಿದೆ ಎಂದು ರೋಜರ್ ಫೆಡರರ್ ತಿಳಿಸಿದರು. ಈ ಟೂರ್ನಿಯ ಗೆಲುವಿನೊಂದಿಗೆ 500 ಎಟಿಪಿ ಅಂಕಗಳನ್ನು ಕಲೆ ಹಾಕಿರುವ ರೋಜರ್ ಫೆಡರರ್, 430,125 ಯುರೋ ನಗದು ಬಹುಮಾನ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com