ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಾಟ್‌

ಭಾರತದ ಮುಂಚೂಣಿ ಕುಸ್ತಿಪಟು ವಿನೇಶ್‌ ಫೋಗಾಟ್‌ ಅವರು 53 ಕೆ.ಜಿ ವಿಭಾಗದಲ್ಲಿ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ದೇಶದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಭಾಜನರಾಗಿದ್ದಾರೆ.
ವಿನೇಶ್‌ ಫೋಗಾಟ್‌
ವಿನೇಶ್‌ ಫೋಗಾಟ್‌

ನೂರ್ ಸುಲ್ತಾನ್: ಭಾರತದ ಮುಂಚೂಣಿ ಕುಸ್ತಿಪಟು ವಿನೇಶ್‌ ಫೋಗಾಟ್‌ ಅವರು 53 ಕೆ.ಜಿ ವಿಭಾಗದಲ್ಲಿ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ದೇಶದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಭಾಜನರಾಗಿದ್ದಾರೆ.

ಇಂದು ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಅಮೆರಿಕದ ಸಾರಾಹ್‌ ಹಿಲ್ಡ್‌ಬ್ರಾಂಡ್‌ ವಿರುದ್ಧ 8-2 ಅಂತರದಲ್ಲಿ ಗೆದ್ದು ಈ ಸಾಧನೆ ಮಾಡಿದ್ದಾರೆ. ಈಗಾಗಲೇ ಚಿನ್ನದ ಪದಕದ ಹಾದಿಯನ್ನು ಕಳೆದುಕೊಂಡಿರುವ ಭಾರತದ ಕುಸ್ತಿಪಟು, ಕಂಚಿನ ಪದಕಕ್ಕಾಗಿ ಜರ್ಮನಿಯ ಮರಿಯಾ ಪ್ರೇವೊಲರಕಿ ವಿರುದ್ಧ ಇಂದು ತಡವಾಗಿ ಸೆಣಸಲಿದ್ದಾರೆ.   
 
ಇದಕ್ಕೂ ಮುನ್ನ ವಿನೇಶ್‌ ಫೋಗಾಟ್‌ ಅವರು ಉಕ್ರೈನ್‌ನ ಯುಲಿಯಾ ಖಲ್ವಾಡ್ಜಿ ವಿರುದ್ಧ 5-0 ಅಂತರದಲ್ಲಿ ಮರುಹಂಚಿಕೆ ಪಂದ್ಯದಲ್ಲಿ ಗೆದ್ದಿದ್ದರು. ಇದರಿಂದ ಅವರು ಕಂಚಿನ ಹಾದಿಯನ್ನು ಉಳಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com