ವಿಶ್ವಕುಸ್ತಿ: ಅಂತಿಮ ಸುತ್ತಿಗೆ ದೀಪಕ್, ಟೋಕಿಯೋ ಒಲಂಪಿಕ್ಸ್ ಟಿಕೆಟ್ ಗಿಟ್ಟಿಸಿದ ಅತಿಕಿರಿಯ ಭಾರತೀಯ!

ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ 19 ವರ್ಷದ ದೀಪಕ್ ಪುನಿಯಾ ಇದೀಗ ಟೋಕಿಯೊ 2020 ಒಲಿಂಪಿಕ್ ಕೋಟಾ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
ದೀಪಕ್ ಪುನಿಯಾ
ದೀಪಕ್ ಪುನಿಯಾ

ನೂರ್-ಸುಲ್ತಾನ್ (ಕಝಕಿಸ್ತಾನ): ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ 19 ವರ್ಷದ ದೀಪಕ್ ಪುನಿಯಾ ಇದೀಗ ಟೋಕಿಯೊ 2020 ಒಲಿಂಪಿಕ್ ಕೋಟಾ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.

2016 ರಲ್ಲಿ ವಿಶ್ವ ಕೆಡೆಟ್ ಪ್ರಶಸ್ತಿಯನ್ನು ಗೆದ್ದಿರುವ ದೀಪಕ್, ಈ ವಾರ ಟೋಕಿಯೊ ಟಿಕೆಟ್ ಕಾಯ್ದಿರಿಸಿಕೊಂಡ ನಾಲ್ಕನೇ ಭಾರತೀಯ ಆಟಗಾರರಾಗಿದ್ದಾರೆ. ಇದಕ್ಕೆ ಮುನ್ನ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ರವಿ ಕುಮಾರ್ ದಹಿಯಾ  ಟೋಕಿಯೋ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಉಳಿದವರು ಕಂಚಿನ ಪದಕ ಗಳಿಸಿದ್ದರೆ ದೀಪಕ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಲಿದ್ದಾರೆ.

ಚಾಂಪಿಯನ್‌ಶಿಪ್‌ ಅಂತಿಮ ದಿನಆದ ಶನಿವಾರ ದೀಪಕ್ ಪುರುಷರ 86 ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಕೊಲಂಬಿಯಾದ ಕಾರ್ಲೋಸ್ ಮೆಂಡೆಜ್ ಅವರನ್ನು 7-6ರಿಂದ ಮುನ್ನಡೆಸಿದ ನಂತರ ಈ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com