ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌: ಭಾರತಕ್ಕೆ ಒಂಬತ್ತನೇ ಬಂಗಾರ

 ಇಲ್ಲಿ ನಡೆಯುತ್ತಿರುವ 10ನೇ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌ನ 4*100ಮೀ. ಮೆಡ್ಲಿ ರಿಲೆ ವಿಭಾಗದಲ್ಲಿ ಭಾರತದ ಪುರುಷರ ತಂಡವು ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.
ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌: ಭಾರತಕ್ಕೆೆ ಒಂಬತ್ತನೇ ಬಂಗಾರ
ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌: ಭಾರತಕ್ಕೆೆ ಒಂಬತ್ತನೇ ಬಂಗಾರ

ಬೆಂಗಳೂರು : ಇಲ್ಲಿ ನಡೆಯುತ್ತಿರುವ 10ನೇ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌ನ 4*100ಮೀ. ಮೆಡ್ಲಿ ರಿಲೆ ವಿಭಾಗದಲ್ಲಿ ಭಾರತದ ಪುರುಷರ ತಂಡವು ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.

ಗುರುವಾರ ನಗರದ ಪಡುಕೋಣೆ-ದ್ರಾವಿಡ್ ಕೇಂದ್ರದಲ್ಲಿ ಶ್ರೀಹರಿ ನಟರಾಜ್, ಸಾಜನ್ ಪ್ರಕಾಶ್, ಲಿಖಿತ್ ಎಸ್.ಪಿ ಹಾಗೂ ವೀರ್‌ಧವಳ್ ಖಾಡೆ ಅವರನ್ನೊಳಗೊಂಡ ತಂಡ, 4*100ಮೀ. ಮೆಡ್ಲಿ ರಿಲೆ ಸ್ಪರ್ಧೆಯನ್ನು 3:46.49 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಭಾರತಕ್ಕೆೆ 9ನೇ ಸ್ವರ್ಣ ಪದಕ ತಂದುಕೊಟ್ಟಿತು.  ಥಾಯ್ಲೆಂಡ್ (3:48.89) ಬೆಳ್ಳಿ ಪದಕ ತನ್ನದಾಗಿಸಿಕೊಂಡರೆ, ಹಾಂಕಾಂಗ್ ಕಂಚಿನ ಪದಕಕ್ಕೆೆ ತೃಪ್ತಿಪಟ್ಟಿತು. 

ರಿಲೆ ಆರಂಭವಾದ ಕ್ಷಣ ಥಾಯ್ಲೆಂಡ್ ಹಾಗೂ ಹಾಂಕಾಂಗ್‌ನಿಂದ ಪ್ರಬಲ ಪೈಪೋಟಿ ಎದುರಾಗಿತ್ತು. ಆದರೆ,  56.55 ಸೆಕೆಂಡ್‌ನಲ್ಲಿ ಶ್ರೀಹರಿ ನಟರಾಜ್ ಬ್ಯಾಕ್ ಸ್ಟ್ರೋಕ್ ಮೂಲಕ ಹಾಂಕಾಂಗ್‌ನ ಲಾ ಶಿಯು ಯು(57.72) ಹಾಗೂ ಥಾಯ್ಲೆಂಡ್ ನ  ಕಾಸಿಪತ್ ಚೋಗ್ರಾಥಿನ್(58.41) ಅವರನ್ನು ಹಿಂದಿಕ್ಕಿದರು. ಸಾಜನ್ ಪ್ರಕಾಶ್(54.50 ಸೆ.) ಅವರು ಬಟರ್‌ಫ್ಲೈ ವಿಭಾಗದಲ್ಲಿ ಭಾರತಕ್ಕೆೆ ಮುನ್ನಡೆ ತಂದುಕೊಟ್ಟರು. ಥಾಯ್ಲೆಂಡ್ ನ  ನವಾಫಟ್ ವೊಂಗ್ಚರೋಯೆನ್ (54.50 ಸೆ.) ಹಾಗೂ ಹಾಂಕಾಂಗ್‌ನ ಚೆಯುಂಗ್ ಯೌ ಮಿಂಗ್ (56.60 ಸೆ.) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾಾನ ಪಡೆದರು.

ಲಿಖಿತ್ ಎಸ್.ಪಿ ಅವರು ಸ್ವಿಮ್ಮಿಂಗ್  ಬ್ರೆೆಸ್ಟ್‌ ಸ್ಟ್ರೋಕ್‌ನಲ್ಲಿ 1:02.47 ಸೆ. ಸಮಯದಲ್ಲಿ ಪೂರ್ಣಗೊಳಿಸಿ ಮುನ್ನಡೆಯನ್ನು ಇನ್ನಷ್ಟು ಇಗ್ಗಿಸಿದರು. ಥಾಯ್ಲೆಂಡ್ ನ ನುಟ್ಟಪಾಂಗ್ ಕೆಟಿನ್ 1:03.69 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದರೆ, ಹಾಂಕಾಂಗ್‌ನ ಎನ್.ಜಿ ಯಾನ್ ಕಿನ್ ಅವರು 1:05.82 ಸೆಕೆಂಡ್‌ಗಳಲ್ಲಿ ಮುಗಿಸಿ ಮೂರನೇ ಸ್ಥಾನ ಅಲಂಕರಿಸಿದರು. 

ಬುಧವಾರ 50ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ವೀರ್‌ಧವಳ್ ಖಾಡೆ 53.00 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಭಾರತಕ್ಕೆೆ ಚಿನ್ನದ ಪದಕ ತಂದುಕೊಟ್ಟರು. ಇನ್ನು, ಥಾಯ್ಲೆಂಡ್ ನ ಟಾರಿಟ್ ಥೊಂಗ್ಚುಮ್ಸಿನ್ (52.29) ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಅವರು ಭಾರತದ ಈಜುಗಾರನನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವರು ಬೆಳ್ಳಿ ಪದಕಕ್ಕೆೆ ತೃಪ್ತರಾದರು. ಹಾಂಕಾಂಗ್ ಫುಂಗ್ ಚುಂಗ್ ಹೋ ಅವರು 53.85 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಕಂಚಿನ ಪದಕಕ್ಕೆೆ ಸೀಮಿತರಾದರು.

ವನಿತೆಯರ ತಂಡಕ್ಕೆೆ ಬೆಳ್ಳಿ:

4*100ಮೀ. ಮೆಡ್ಲೆೆ ರಿಲೆ ಮಹಿಳೆಯರ ವಿಭಾಗದಲ್ಲಿ  ಮಾನ ಪಟೇಲ್, ದಿವ್ಯಾ ಸಾತೀಜಾ ಅರೋರಾ ಹಾಗೂ ಶಿವಾನಿ ಕಟಾರಿಯಾ ತಂಡವು 4:26.69 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಬೆಳ್ಳಿ ಪದಕಕ್ಕೆೆ ತೃಪ್ತಿಪಟ್ಟಿತು. ಥಾಯ್ಲೆಂಡ್ ತಂಡ 4:23.23 ಸೆಕೆಂಡ್‌ಗಳಲ್ಲಿ ರೇಸ್ ಮುಗಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತು. 4:31.19 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ಹಾಂಕಾಂಗ್ ತಂಡ ಕಂಚಿನ ಪದಕ ಪಡೆಯಿತು. 

ಮೂರನೇ ದಿನದ ಫಲಿತಾಂಶ

4*100ಮೀ. ಫ್ರೀ ಸ್ಟೈಲ್ (ಮಿಶ್ರ ಗುಂಪು-2)
1. ಜಪಾನ್ (3:46.48)
2. ಹಾಂಕಾಂಗ್ (3:48.48)
3. ಥಾಯ್ಲೆಂಡ್ (3:50.98)

4*100ಮೀ. (ಪುರುಷರ ಓಪನ್ ವಿಭಾಗ)
1.ಭಾರತ (3:46.49)
2. ಥಾಯ್ಲೆಂಡ್ (3:48.89)
3. ಹಾಂಕಾಂಗ್ (3:53.99)

4*100ಮೀ. (ಮೆಡ್ಲೆೆ (ಮಹಿಳಾ ಓಪನ್ ವಿಭಾಗ)
1. ಥಾಯ್ಲೆಂಡ್ (4:23.23)
2. ಭಾರತ (4:26.69)
3. ಹಾಂಕಾಂಗ್ (4:31.19)

4*200ಮೀ. (ಫ್ರೀ ಸ್ಟೈಲ್ (ಗುಂಪು-1 ಬಾಲಕರು) 
1. ಜಪಾನ್ (7:37.59)
2. ಹಾಂಕಾಗ್ (7:52.26)
3. ಥಾಯ್ಲೆಂಡ್ (7:55.17)

4*200ಮೀ. ಫ್ರೀ ಸ್ಟೈಲ್ (ಗುಂಪು-1 ಬಾಲಕಿಯರು)

1. ಜಪಾನ್ (8:23.26)
2. ಹಾಂಕಾಂಗ್ (8:41.20)
3. ಥಾಯ್ಲೆಂಡ್ (8:48.52)
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com