ಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ 'ಮಾನ್ಸ್ಟರ್ ಹೀಲ್ ಕಮಲಾ' ನಿಧನ

ದಢೂತಿ ಬೊಜ್ಜಿನ ದೇಹ, ವಿಭಿನ್ನವಾಗಿ ಬಣ್ಣ ಬಳಿದುಕೊಂಡು, ವಿಚಿತ್ರ ಮಾಸ್ಕ್ ನೊಂದಿಗೆ ರಂಗಪ್ರವೇಶ ಮಾಡುತ್ತಿದ್ದ ಮಾನ್ಸ್ಟರ್ ಹೀಲ್ ಕಮಲಾ ಎಂದೇ ಖ್ಯಾತರಾಗಿದ್ದ ಅಮೆರಿಕಾದ ಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ ಜೇಮ್ಸ್ ಹ್ಯಾರಿಸ್ ಮೃತಪಟ್ಟಿದ್ದಾರೆ.
ಜೇಮ್ಸ್ ಕಮಲಾ ಹ್ಯಾರಿಸ್
ಜೇಮ್ಸ್ ಕಮಲಾ ಹ್ಯಾರಿಸ್
Updated on

ವಾಷಿಂಗ್ಟನ್: ದಢೂತಿ ಬೊಜ್ಜಿನ ದೇಹ, ವಿಭಿನ್ನವಾಗಿ ಬಣ್ಣ ಬಳಿದುಕೊಂಡು, ವಿಚಿತ್ರ ಮಾಸ್ಕ್ ನೊಂದಿಗೆ ರಂಗಪ್ರವೇಶ ಮಾಡುತ್ತಿದ್ದ ಮಾನ್ಸ್ಟರ್ ಹೀಲ್ ಕಮಲಾ ಎಂದೇ ಖ್ಯಾತರಾಗಿದ್ದ ಅಮೆರಿಕಾದ ಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ ಜೇಮ್ಸ್ ಹ್ಯಾರಿಸ್ ಮೃತಪಟ್ಟಿದ್ದಾರೆ. 

70 ವರ್ಷದ ಜೇಮ್ಸ್ ಹ್ಯಾರಿಸ್ ಅವರು 6 ಅಡಿ 7 ಇಂಚಿದ್ದು 380 ಪೌಂಡ್ ತೂಗುತ್ತಿದ್ದರು. ಇನ್ನು ಡಬ್ಲ್ಯೂಡಬ್ಲ್ಯೂಇನ ಪ್ರಖ್ಯಾತ ಸ್ಟಾರ್ ಗಳಾದ ಹಲ್ಕ್ ಹೋಗನ್, ದಿ ಅಂಡರ್ ಟೇಕರ್ ಮತ್ತು ಆ್ಯಂಡ್ರಿ ದಿ ಗೈಂಟ್ ಜೊತೆ ಸೆಣೆಸಾಡಿದ್ದರು. 

ಬಾಬೊ ಬ್ರಝಿಲ್ ಅವರ ಅಡಿಯಲ್ಲಿ ರಸ್ಲಿಂಗ್ ಅಭ್ಯಾಸ ಆರಂಭಿಸಿದ್ದ ಹ್ಯಾರಿಸ್ ನಂತರ ಸೌತ್ ಈಸ್ಟ್ ಅಮೆರಿಕಾದಲ್ಲಿ ವೃತ್ತಿ ಆರಂಭಿಸಿ ಮೊದಲಿಗೆ ಎನ್ಡಬ್ಲ್ಯೂಎ ಪ್ರಶಸ್ತಿ ಜಯಿಸಿದ್ದರು. ಆ ಬಳಿಕ ಹ್ಯಾರಿಸ್ ಡಬ್ಲ್ಯೂಡಬ್ಲ್ಯೂಗೆ ಎಂಟ್ರಿ ಕೊಟ್ಟಿದ್ದರು. 

2010ರವರೆಗೂ ಡಬ್ಲ್ಯೂಡಬ್ಲ್ಯೂಇನಲ್ಲಿ ಸೆಣೆಸುತ್ತಿದ್ದ ಅವರು ನಂತರ ಅನಾರೋಗ್ಯದಿಂದಾಗಿ ರಿಂಗ್ ನಿಂದ ದೂರ ಉಳಿಯಬೇಕಾಗಿ ಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com