ಪುಲ್ಲೇಲಾ ಗೋಪಿಚಂದ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಒಲಿಂಪಿಕ್ ಸಮಿತಿ ತರಬೇತುದಾರರ ಜೀವಮಾನ ಸಾಧನೆ ಪ್ರಶಸ್ತಿಗೆ ಪುರುಷರ ವಿಭಾಗದಲ್ಲಿ ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಭಾಜನರಾಗಿದ್ದಾರೆ. ದೇಶದ ಬ್ಯಾಡ್ಮಿಂಟನ್ ಕ್ರೀಡೆಗೆ ನೀಡಿರುವ ಕೊಡುಗೆಗಾಗಿ ಇವರಿಗೆ ಪುರಸ್ಕಾರ ನೀಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಒಲಿಂಪಿಕ್ ಸಮಿತಿ ತರಬೇತುದಾರರ ಜೀವಮಾನ ಸಾಧನೆ ಪ್ರಶಸ್ತಿಗೆ ಪುರುಷರ ವಿಭಾಗದಲ್ಲಿ ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಭಾಜನರಾಗಿದ್ದಾರೆ. ದೇಶದ ಬ್ಯಾಡ್ಮಿಂಟನ್ ಕ್ರೀಡೆಗೆ ನೀಡಿರುವ ಕೊಡುಗೆಗಾಗಿ ಇವರಿಗೆ ಪುರಸ್ಕಾರ ನೀಡಲಾಗಿದೆ.

‘‘2019ರ ಐಒಸಿ ತರಬೇತುದಾರರ ಜೀವಮಾನ ಸಾಧನೆ ಪ್ರಶಸ್ತಿಗಳ ಪುರುಷ ವಿಭಾಗಕ್ಕಾಗಿ ಪುಲ್ಲೇಲಾ ಗೋಪಿಚಂದ್ ಅವರಿಗೆ ಗೌರವಾನ್ವಿತ ಉಲ್ಲೇಖವನ್ನು ನೀಡಲಾಗುತ್ತಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ ಎಂದು ಐಒಸಿ ಕ್ರೀಡಾಪಟುಗಳ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಬ್ಯಾಡ್ಮಿಂಟನ್ ಅಭಿವೃದ್ಧಿಯಲ್ಲಿ ಅವರ ಪ್ರಯತ್ನ ಹಾಗೂ ಒಲಿಂಪಿಕ್‌ಸ್‌ ಕ್ರೀಡಾಕೂಟದ ಹಿನ್ನೆೆಲೆಯಲ್ಲಿ ಅಥ್ಲಿಟ್‌ಗಳಿಗೆ ಅವರು ನೀಡಿರುವ ಸಹಕಾರ ಹಾಗೂ ಬೆಂಬಲ ಅಪಾರವಾಗಿದೆ. ಹಾಗಾಗಿ, ಅವರ ಕಾರ್ಯವೈಖರಿಯನ್ನು ಗುರುತಿಸಲು ಸಮಿತಿ ನಿರ್ಧರಿಸಿದೆ.

ಭಾರತದಲ್ಲಿ ಬ್ಯಾಡ್ಮಿಂಟನ್ ಅಭಿವೃದ್ಧಿಯಲ್ಲಿ ಗೋಪಿಚಂದ್ ಕೊಡುಗೆ, ಕ್ರೀಡೆಗಳಲ್ಲಿ ಕ್ರೀಡಾಪಟುಗಳನ್ನು ಬೆಂಬಲಿಸುವಲ್ಲಿ ಅವರು ಮಾಡಿದ ಪ್ರಯತ್ನಗಳು ಮತ್ತು ಒಲಿಂಪಿಕ್ಸ್‌ಗೆ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲು ಸಮಿತಿ ಬಯಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com