ಮೆಲ್ಬೊರ್ನ್: ವಿಶ್ವದ ನಂಬರ್ 1 ಆಟಗಾರ ಸ್ಪೇನ್ ರಫೇಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ಸ್ ತಲುಪಿದ್ದಾರೆ.
ರೋಡ್ ಲಾವೆರ್ ಅರೇನಾದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ನಡಾಲ್ 6-1, 6-2, 6-4 ರಿಂದ ತಮ್ಮದೇ ದೇಶದ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಅವರನ್ನು ಒಂದು ಗಂಟೆ 38 ನಿಮಿಷದ ಹೋರಾಟದಲ್ಲಿ ಮಣಿಸಿದರು. ನಡಾಲ್ 11ನೇ ಬಾರಿಗೆ ಟೂರ್ನಿಯ 16ನೇ ಘಟ್ಟ ಪ್ರವೇಶಿಸಿದ್ದಾರೆ.
ಉಳಿದಂತೆ ಡೇನಿಲ್ ಮೆಡ್ವೆಡೆವ್ 6-4, 6-3, 6-2 ರಿಂದ ಅಲೆಕ್ಸಿ ಪಾಪಿರಿನ್ ಅವರನ್ನು, ಡೋಮಿನಿಕ್ ಥೀಮ್ 6-2, 6-4, 6-7, 6-4 ರಿಂದ ಅಮೆರಿಕದ ಟೇಲರ್ ಫ್ರಿಡ್ಜ್ ಅವರನ್ನು, ಎಳನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ 6-2, 6-2, 6-4 ರಿಂದ ಫರ್ನಾಂಡೊ ವರ್ಡಾಸ್ಕೊ ಅವರನ್ನು ಮಣಿಸಿದರು.
ಸ್ವಿಟ್ಜರ್ ಲೆಂಡ್ ನ ಸ್ಟಾನಿಸ್ಲಾಸ್ ವಾವ್ರಿಂಕ 6-4, 4-1 ರಿಂದ ಮುನ್ನುಗುತ್ತಿದ್ದಾಗ ಜಾನ್ ಇಸ್ನರ್ ಗಾಯಕ್ಕೆ ತುತ್ತಾಗಿ ಅಂಗಳದಿಂದ ಹೊರ ನಡೆದರು.
Advertisement