ಆಸ್ಟ್ರೇಲಿಯಾ ಓಪನ್: ಲಿಯಾಂಡರ್ ಪೇಸ್ ಜೋಡಿಗೆ ಸೋಲು, ಭಾರತದ ಅಭಿಯಾನ ಅಂತ್ಯ

ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ. ಆ ಮೂಲಕ ಭಾರತ ಆಟಗಾರರ ಸವಾಲು ಅಂತ್ಯವಾಯಿತು.
ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್
Updated on

ಮೆಲ್ಬೋರ್ನ್: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ. ಆ ಮೂಲಕ ಭಾರತ ಆಟಗಾರರ ಸವಾಲು ಅಂತ್ಯವಾಯಿತು.

ಮಂಗಳವಾರ ನಡೆದ ಪುರುಷರ ಡಬಲ್ಸ್ ಎರಡನೇ ಸುತ್ತಿನಲ್ಲಿ ಲಿಯಾಂಡರ್ ಪೇಸ್ ಹಾಗೂ ಲ್ಯಾಟಿವಿಯಾದ ಜಲೇನಾ ಒಸ್ಟಾಪೆಂಕೊ ಜೋಡಿಯು 2-6, 5-7 ಅಂತರದಲಲ್ಇ ಜ್ಯಾಮಿ ಮರ್ರೆ ಹಾಗೂ ಬೆಥಾನಿ ಮಟ್ಟೆಕ್ ಸ್ಯಾಂಡ್ಸ್ ಜೋಡಿಗೆ ಶರಣಾಯಿತು.

ಪಂದ್ಯದ ಆರಂಭದಿಂದಲೂ ಎದುರಾಳಿ ಜೋಡಿಯು ಪೇಸ್ ಜೋಡಿಯನ್ನು ಮುಂದುವರಿಯಲು ಬಿಡಲೇ ಇಲ್ಲ. ಹಾಗಾಗಿ, ಮೊದಲನೇ ಸೆಟ್ ನಲ್ಲಿ ಭಾರಿ ಅಂತರದಲ್ಲಿ ಪೇಸ್ ಹಾಗೂ ಜಲೇನಾ ಜೋಡಿ ಸೋಲು ಒಪ್ಪಿಕೊಂಡಿತು. ನಂತರ, ಎರಡನೇ ಸೆಟ್ ನಲ್ಲಿ ಕೊಂಚ ಪ್ರತಿರೋಧ ತೋರಿದ ಲಿಯಾಂಡರ್ ಪೇಸ್ ಜೋಡಿ ಕೇವಲ ಎರಡು ಅಂಕಗಳ ಅಂತರದಿಂದ ಸೋಲು ಒಪ್ಪಿಕೊಂಡಿತು.

2020ರ ವರ್ಷ ನನ್ನ ಪಾಲಿಗೆ ಟೆನಿಸ್ ಕೊನೆಯ ವರ್ಷ ಎಂದು ಲಿಯಾಂಡರ್ ಪೇಸ್ ಕಳೆದ ವರ್ಷ ತಿಳಿಸಿದ್ದರು. ಪೇಸ್ ತನ್ನ ವೃತ್ತಿ ಜೀವನದಲ್ಲಿ ಎಂಟು ಡಬಲ್ಸ್ ಹಾಗೂ 10 ಮಿಶ್ರ ಡಬಲ್ಸ್ ಗ್ರ್ಯಾಮ್ ಸ್ಲ್ಯಾಮ್ ಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com