25 ವರ್ಷಗಳ ನಂತರ ರಾಷ್ಟ್ರೀಯ ಅಥ್ಲೆಟಿಕ್ಸ್ ಮುಖ್ಯ ಕೋಚ್ ಬಹದ್ದೂರ್ ಸಿಂಗ್ ರಾಜೀನಾಮೆ

25 ವರ್ಷಗಳ ಸುಧೀರ್ಘ ಸೇವೆಯ ನಂತರ ರಾಷ್ಟ್ರೀಯ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಹದ್ದೂರ್ ಸಿಂಗ್ ಅವರ ಬಗ್ಗೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್ಐ) ಮೆಚ್ಚುಗೆ ವ್ಯಕ್ತಪಡಿಸಿದೆ.
ಬಹದ್ದೂರ್ ಸಿಂಗ್
ಬಹದ್ದೂರ್ ಸಿಂಗ್

ನವದೆಹಲಿ: 25 ವರ್ಷಗಳ ಸುಧೀರ್ಘ ಸೇವೆಯ ನಂತರ ರಾಷ್ಟ್ರೀಯ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಹದ್ದೂರ್ ಸಿಂಗ್ ಅವರ ಬಗ್ಗೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್ಐ) ಮೆಚ್ಚುಗೆ ವ್ಯಕ್ತಪಡಿಸಿದೆ.

2010ರಲ್ಲಿ ದಿಲ್ಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗ್ ನೇತೃತ್ವದಲ್ಲಿ ಪಾಲ್ಗೊಂಡಿದ್ದ ಭಾರತೀಯ ಅಥ್ಲೀಟ್ ಗಳ ಗುಂಪು ಎರಡು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದ ಸಾಧನೆ ಮಾಡಿತ್ತು.

2018ರಲ್ಲಿ ಜಕಾರ್ತದಲ್ಲಿ ನಡೆದ ಚಾಂಪಿಯನ್ ಷಿಪ್ ನಲ್ಲಿ ಎಂಟು ಚಿನ್ನ ಮತ್ತು 9 ಬೆಳ್ಳಿ ಸೇರಿದಂತೆ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಭಾರತ, 20 ಪದಕಗಳನ್ನು ಜಯಿಸಿದ್ದು 1946ರಲ್ಲಿ ಜನಿಸಿದ್ದ ಸಿಂಗ್ ಅವರ ಸ್ಮರಣೀಯ ಕ್ಷಣವಾಗಿದೆ.

'ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸುವ ಕಡೆಗೆ ನಮ್ಮ ಗಮನ ಕೇಂದ್ರೀಕರಿಸಿದ್ದೇವೆ. ಈ ಹಾದಿಯಲ್ಲಿ ಭಾರತೀಯ ಅಥ್ಲೆಟಿಕ್ಸ್‌ಗೆ ಬಹದ್ದೂರ್ ಸಿಂಗ್‌ ಅವರು ಸಲ್ಲಿಸಿರುವ ಅಮೋಘ ಕೊಡುಗೆಯನ್ನು ಸ್ಮರಿಸಲಾಗುವುದು. ಮೊದಲಿಗೆ 70 ಮತ್ತು 80ರ ದಶಕದಲ್ಲಿ ಒಬ್ಬ ಶಾಟ್‌ಪುಟ್‌ ಕ್ರೀಡಾಪಟುವಾಗಿ, ಬಳಿಕ 1995ರಿಂದೀಚೆಗೆ ಮುಖ್ಯ ಕೋಚ್‌ ಆಗಿ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಲಾಗುವುದು" ಎಂದು ಎಎಫ್ಐ ಅಧ್ಯಕ್ಷ ಅದಿಲ್ಲೆ ಸುಮಾರಿವಲ್ಲಾ ಹೇಳಿದ್ದಾರೆ.

ಮುಂದುವರಿದು, ಒಲಿಂಪಿಕ್ ಕ್ರೀಡಾಕೂಟದಲ್ಲಿ ಅವರು ತಂಡವನ್ನು ಮುನ್ನಡೆಸುವುದನ್ನು ನೋಡಲು ನಾವು ಇಷ್ಟಪಡುತ್ತಿದ್ದೆವು. ಆದರೆ ಕೋವಿಡ್-19ನಿಂದಾಗಿ 2020ರ ಟೋಕಿಯೊ ಕ್ರೀಡಾಕೂಟವನ್ನು ಮುಂದೂಡುವಂತಾಗಿದೆ. ಹಿರಿಯ ನಾಗರಿಕರ ಸಂಚಾರವನ್ನು ನಿರ್ಬಂಧಿಸಿರುವ ಗೃಹ ಸಚಿವಾಲಯದ ಸಲಹೆ ಮೇರೆಗೆ ಅವರು ರಾಜೀನಾಮೆ ನೀಡಿದ್ದಾರೆ. ಯೋಜನೆ ಮತ್ತು ಮೇಲ್ವಿಚಾರಣೆ ತರಬೇತಿ ಹಾಗೂ ತರಬೇತಿಯಲ್ಲಿ ಅವರ ಅನುಭವವನ್ನು ಸಮರ್ಥವಾಗಿ ನಾವು ಬಳಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಸಿಂಗ್ ಸಾಧನೆ ಮತ್ತು ಪುರಸ್ಕಾರ
ಬ್ಯಾಂಕಾಕ್ (1978) ಮತ್ತು ಹೊಸದಿಲ್ಲಿ (1982) ನಡೆದ ಏಷ್ಯನ್ ಗೇಮ್ಸ್ ನಲ್ಲಿ ಸತತ ಸ್ವರ್ಣ ಪದಕ ಜಯಿಸಿದ್ದ ಶಾಟ್ ಪುಟ್ ಎಸೆತಗಾರ ಸಿಂಗ್, ತೆಹ್ರಾನ್ ನಲ್ಲಿ ನಡೆದ 1974ರ ಗೇಮ್ಸ್ ನಲ್ಲಿಯೂ ಬೆಳ್ಳಿ ಪದಕ ಜಯಿಸಿದ್ದರು. ಇದಲ್ಲದೆ ನಾಲ್ಕು ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಟ್ ಕೂಟಗಳಲ್ಲಿಯೂ (ಮರಿಕಿಣ -1973 (ಕಂಚು), ಸಿಯೋಲ್ - 1975 (ಚಿನ್ನ), ಟೋಕಿಯೊ-1979 (ಕಂಚು) ಮತ್ತು ಟೋಕಿಯೊ-1981 (ಬೆಳ್ಳಿ)) ಬಹದೂರ್ ಪದಕ ಗೆದ್ದ ಸಾಧನೆ ತೋರಿದ್ದಾರೆ.

1980ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಿಂಗ್ ಅವರು 1976ರಲ್ಲಿ ಅರ್ಜುನ ಪ್ರಶಸ್ತಿ, 1998ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಮತ್ತು 1983ರಲ್ಲಿ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com