ಚೆನ್ನೈ: ಭಾರತ ಪುರುಷರ ರಾಷ್ಟ್ರೀಯ ಹಾಕಿ ತಂಡದ ಅನಲಿಟಿಕಲ್ ಕೋಚ್ ಮತ್ತು ಡೈರೆಕ್ಟರ್ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಥಾನಕ್ಕೆ ಹಾಕಿ ಇಂಡಿಯಾ ವೆಬ್ ಸೈಟ್ ನಲ್ಲಿ ಜಾಹೀರಾತು ಹೊರಡಿಸಲಾಗಿದೆ. ನವೆಂಬರ್ 15 ಅರ್ಜಿ ಸ್ವೀಕರಿಸಲು ಕೊನೆಯ ದಿನವಾಗಿದೆ.
ವಿಶೇಷವೆಂದೆ ಈ ಎರಡು ಹುದ್ದೆಗಳ ಗುತ್ತಿಗೆ ಅವಧಿ ಮುಂದಿನ ವರ್ಷದ ಸೆಪ್ಟೆಂಬರ್ 30ರವರೆಗೆ ಮಾತ್ರ ಇರಲಿದೆ. ಟೊಕಿಯೋ ಗೇಮ್ಸ್ ನಲ್ಲಿ ತಂಡ ಯಾವ ರೀತಿಯಲ್ಲಿ ಪ್ರದರ್ಶನ ತೋರಲಿದೆ ಎಂಬುದರ ಮೇಲೆ ಗುತ್ತಿಗೆ ಅವಧಿ 2021ರವರೆಗೆ ವಿಸ್ತರಣೆಯಾಗಬಹುದು.
ಹಾಕಿ ಇಂಡಿಯಾದ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಡೇವಿಡ್ ಜಾನ್ ಮತ್ತು ಅನಲಿಟಿಕಲ್ ಕೋಚ್ ಕ್ರಿಸ್ ಸಿರಿಯೆಲ್ಲೊ ಒಲಿಂಪಿಕ್ಸ್ ಮುಗಿಯುವವರೆಗೂ ಇರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅನಾರೋಗ್ಯದ ಕಾರಣ ನೀಡಿ ಅವರಿಬ್ಬರು ಈ ವರ್ಷದ ಆರಂಭದಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
Advertisement