ಟರ್ಕಿಷ್ ಗ್ರಾಂಡ್ ಗ್ರಾಂಡ್ ಪ್ರಿಕ್ಸ್: 7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು, ಮೈಕಲ್ ಶೂಮಾಕರ್ ದಾಖಲೆ ಸರಗಟ್ಟಿದ ಲೂಯಿಸ್ ಹ್ಯಾಮಿಲ್ಟನ್
ಅಂಕಾರ: ಖ್ಯಾತ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ 7ನೇ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ರೇಸ್ ಗೆಲ್ಲು ಮೂಲಕ ರೇಸಿಂಗ್ ದಂತಕಥೆ ಮೈಕಲ್ ಶೂಮಾಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟರ್ಕಿಯ ಇಸ್ತಾನ್ ಬುಲ್ ಪಾರ್ಕ್ ನಲ್ಲಿ ನಡೆದ ಟರ್ಕಿಷ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ 35 ವರ್ಷದ ರೇಸರ್ ಹ್ಯಾಮಿಲ್ಟನ್ 1:42:19.313 ಅವಧಿಯಲ್ಲಿ ಗುರಿ ಮುಟ್ಟುವ ಮೂಲಕ 25 ಅಂಕಗಳಿಸಿ ಅಗ್ರ ಸ್ಥಾನಿಯಾದರು. ಇವರಿಗೆ ತೀವ್ರ ಪೈಪೋಟಿ ನೀಡಿದ ಸೆರ್ಜಿಯೋ ಪೆರೇಜ್ 18 ಅಂಕಗಳಿಸಿ 2ನೇಸ್ಥಾನ ಪಡೆದರು. ಮಾಜಿ ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್ 15 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.
2008ರಲ್ಲಿ ಮೊದಲ ಫಾರ್ಮುಲಾ ಒನ್ ವೃತ್ತಿಪರ ರೇಸ್ ಪ್ರಶಸ್ತಿ ಗಳಿಸಿದ್ದ ಲೂಯಿಸ್ ಹ್ಯಾಮಿಲ್ಟನ್, ಬಳಿಕ ತಮ್ಮ ವೃತ್ತಿ ಜೀವನದಲ್ಲಿ ಈವರೆಗೂ 94 ರೇಸ್ ಗಳನ್ನು ಜಯಿಸಿದ್ದಾರೆ. ಅಂತೆಯೇ 97 ಪೋಲ್ ಪೊಸಿಷನ್ ಸಾಧಿಸಿದ್ದು, 163 ಪೋಡಿಯಂ ಫಿನಿಷ್ ಮಾಡಿದ್ದಾರೆ.
The emotions spill out, as @LewisHamilton conquers the world for the seventh time ❤️
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ