ಕಟಿಯಾ ಅವೇರೊ-ರೊನಾಲ್ಡೊ
ಕ್ರೀಡೆ
'ಇಂಥ ದೊಡ್ಡ ವಂಚನೆ ನಾನೆಂದೂ ಕಂಡಿಲ್ಲ': ಕೊರೋನಾ ಟೆಸ್ಟ್ ವಿರುದ್ಧ ರೊನಾಲ್ಡೊ ಸಹೋದರಿ ಕಿಡಿ
ವಿಶ್ವ ವಿಖ್ಯಾತ ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಕೊರೋನಾ ಟೆಸ್ಟ್ ವರದಿ ಪಾಸಿಟಿವ್ ಬಂದ ಒಂದ ದಿನದ ಬಳಿಕ, ಪೋರ್ಚುಗಲ್ ಆಟಗಾರನ ಸಹೋದರಿ ಕಟಿಯಾ ಅವೇರೊ, ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ನವದೆಹಲಿ: ವಿಶ್ವ ವಿಖ್ಯಾತ ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಕೋವಿಡ್-19 ಟೆಸ್ಟ್ ವರದಿ ಪಾಸಿಟಿವ್ ಬಂದ ಒಂದ ದಿನದ ಬಳಿಕ, ಪೋರ್ಚುಗಲ್ ಆಟಗಾರನ ಸಹೋದರಿ ಕಟಿಯಾ ಅವೇರೊ, ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಸದ್ಯ ಕ್ರಿಸ್ಟಿಯಾನೊ ರೊನಾಲ್ಡೊ ಐಸೋಲೆಷನ್‌ನಲ್ಲಿದ್ದು, ಬಾರ್ಸಿಲೋನಾ ವಿರುದ್ಧದ ಮುಂದಿನ ಶನಿವಾರ ನಡೆಯುವ ಎಲ್ ಕ್ಲಾಸಿಯೋ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ತಿಳಿಯುತ್ತಿಲ್ಲ.
ಆದರೆ, ರೊನಾಲ್ಡೊ ಸಹೋದರಿ ಈ ಎಲ್ಲಾ ಬೆಳವಣಿಗೆಗಳು ಮೋಸ ಎನ್ನುವ ಮೂಲಕ ತಮ್ಮ ಹತಾಶೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹೊರಹಾಕಿದ್ದಾರೆ.
"ಕ್ರಿಸ್ಟಿಯಾನೊ ರೊನಾಲ್ಡೊ ಜಗತ್ತನ್ನು ಎಚ್ಚರಗೊಳಿಸಬೇಕಾದರೆ, ಅವರು ನಿಜವಾಗಿಯೂ ದೇವರ ದೂತನೆಂದು ನಾನು ಹೇಳಬೇಕಾಗಿದೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ