ಸಾರ್‌ಲಾರ್‌ಲಕ್ಸ್ ಓಪನ್: ಲಕ್ಷ್ಯ ಸೇನ್, ಜೈರಾಮ್ ಮತ್ತು ಶುಭಂಕರ್ ಟೂರ್ನಿಯಿಂದ ಹಿಂದಕ್ಕೆ

ಜರ್ಮನಿಯಲ್ಲಿ ನಡೆಯುತ್ತಿರುವ ಸಾರ್‌ಲಾರ್‌ಲಕ್ಸ್ ಓಪನ್ ಪಂದ್ಯಾವಳಿಯಿಂದ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹಿಂದೆ ಸರಿದರು. ಆರನೇ ಶ್ರೇಯಾಂಕಿತ ಶುಭಂಕರ್ ಡೇ ಮತ್ತು ಅಜಯ್ ಜಯರಾಮ್ ಕ್ವಾರಂಟೈನ್ ನಲ್ಲಿ ಇದ್ದಿದ್ದರಿಂದ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಯಿತು. ಮಹಿಳಾ ವಿಭಾಗದಲ್ಲಿ ಮಾಳವಿಕಾ ಬನ್ಸೋಡ್ ಸೋಲು ಕಂಡರು.
ಸಾರ್‌ಲಾರ್‌ಲಕ್ಸ್ ಓಪನ್: ಲಕ್ಷ್ಯ ಸೇನ್, ಜೈರಾಮ್ ಮತ್ತು ಶುಭಂಕರ್ ಟೂರ್ನಿಯಿಂದ ಹಿಂದಕ್ಕೆ

ನವದೆಹಲಿ: ಜರ್ಮನಿಯಲ್ಲಿ ನಡೆಯುತ್ತಿರುವ ಸಾರ್‌ಲಾರ್‌ಲಕ್ಸ್ ಓಪನ್ ಪಂದ್ಯಾವಳಿಯಿಂದ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹಿಂದೆ ಸರಿದರು. ಆರನೇ ಶ್ರೇಯಾಂಕಿತ ಶುಭಂಕರ್ ಡೇ ಮತ್ತು ಅಜಯ್ ಜಯರಾಮ್ ಕ್ವಾರಂಟೈನ್ ನಲ್ಲಿ ಇದ್ದಿದ್ದರಿಂದ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಯಿತು. ಮಹಿಳಾ ವಿಭಾಗದಲ್ಲಿ ಮಾಳವಿಕಾ ಬನ್ಸೋಡ್ ಸೋಲು ಕಂಡರು.

ಪಂದ್ಯಾವಳಿಗಾಗಿ ಅಕ್ಟೋಬರ್ 25 ರಂದು ಜರ್ಮನಿಯ ಸರ್ಬಾರ್ಕೆನ್ ತಲುಪಿದ 19 ವರ್ಷದ ಲಕ್ಷ್ಯ, ಅವರ ಕೋಚ್ ಮತ್ತು ಫಿಸಿಯೋ ಅವರೊಂದಿಗೆ ಟೂರ್ನಿಯಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಸೇನ್ ಮತ್ತು ಫಿಸಿಯೊ ವರದಿಯಲ್ಲಿ ಕೋವಿಡ್-19 ಸೋಂಕು ಇಲ್ಲದಿರುವುದು ದೃಢ ಪಟ್ಟಿದ್ದು, ತರಬೇತುದಾರರ ವರದಿ ಸಕಾರಾತ್ಮಕವಾಗಿದೆ. 

ಮಂಗಳವಾರ ಆರಂಭವಾದ ಈ ಪಂದ್ಯಾವಳಿಯಲ್ಲಿ ಲಕ್ಷ್ಯ ಸೇನ್, ಅಜಯ್ ಜಯರಾಮ್ ಮತ್ತು ಶುಭಂಕರ್ ಡೇಮೂವರು ಆಟಗಾರರುಸ್ಪರ್ಧಿಸುವುದಿಲ್ಲ.

ಪಂದ್ಯಾವಳಿ ಸಂಘಟಕರು, ಸ್ಥಳೀಯ ಆರೋಗ್ಯ ಅಧಿಕಾರಿಗಳು ಮತ್ತು ಬಿಡಬ್ಲ್ಯುಎಫ್ ಪಂದ್ಯಾವಳಿಯ ಆರೋಗ್ಯ ಪ್ರೋಟೋಕಾಲ್‌ಗಳ ನಿರ್ದೇಶನಕ್ಕೆ ಅನುಗುಣವಾಗಿ ಮೂವರು ಆಟಗಾರರು ಐಸೋಲೇಷನ್ ನಲ್ಲಿದ್ದಾರೆ,

ಟೂರ್ನಿಯಿಂದ ಮೂವರೂ ಹೊರಗುಳಿದ ನಂತರ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com