ಬ್ಯಾಡ್ಮಿಂಟನ್ ತಾರೆ ಸಿಕ್ಕಿರೆಡ್ಡಿಗೆ ಕೊರೋನಾ ಸೋಂಕು ದೃಢ, ಗೋಪಿಚಂದ್ ಅಕಾಡೆಮಿ ಸ್ಯಾನಿಟೈಸೇಷನ್

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಎನ್ ಸಿಕ್ಕಿ ರೆಡ್ಡಿ ಅವರಿಗೆ ಗುರುವಾರ ಕೊರೋನಾವೈರಸ್ ಸೋಂಕು ದೃಢಪಟ್ಟಿದೆ,
ಎನ್ ಸಿಕ್ಕಿ ರೆಡ್ಡಿ
ಎನ್ ಸಿಕ್ಕಿ ರೆಡ್ಡಿ

ಚೆನ್ನೈ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಎನ್ ಸಿಕ್ಕಿ ರೆಡ್ಡಿ ಅವರಿಗೆ ಗುರುವಾರ ಕೊರೋನಾವೈರಸ್ ಸೋಂಕು ದೃಢಪಟ್ಟಿದೆ,

ಕಳೆದ ವಾರ ಹೈದರಾಬಾದ್‌ನ ಎಸ್‌ಎಐ ಗೋಪಿಚಂದ್ ಅಕಾಡೆಮಿಯಲ್ಲಿ ನಡೆದ ರಾಷ್ಟ್ರೀಯ ಶಿಬಿರದ ಪುನರಾರಂಭದಲ್ಲಿ ಇತರೆ ಖ್ಯಾತಬ್ಯಾಡ್ಮಿಂಟನ್ ‌ಗಳೊಂದಿಗೆ ಹಾಜರಿದ್ದ 26 ವರ್ಷದ ಸಿಕ್ಕಿ ರೆಡ್ಡಿ ಅವರ ಫಿಸಿಯೋಥೆರಪುಸ್ಟ್ ಸಿ, ಕಿರಣ್ ಅವರೂ ಸಹ ಕೊರೋನಾ ಪಾಸಿಟಿವ್ ವರದಿ ಪಡೆದಿದ್ದಾರೆ.

"ಹೈದರಾಬಾದ್‌ನ ಪುಲ್ಲೆಲಾ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಶಿಬಿರಕ್ಕೆ ಆಗಮಿಸಿದ ಶಟ್ಲರ್ ಎನ್ ಸಿಕ್ಕಿ ರೆಡ್ಡಿ ಮತ್ತು ಫಿಸಿಯೋಥೆರಪಿಸ್ಟ್ ಕ ಸಿ ಕಿರಣ್ ಅವರು ಕೋವಿಡ್ ಸೋಂಕು ಪಾಸಿಟಿವ್ ವರದಿ ಪಡೆಇದ್ದಾರೆ. " ಎಂದು ಎಸ್‌ಎಐ ಪತ್ರಿಕಾ ಪ್ರಕಟಣೆ ಗುರುವಾರ ತಿಳಿಸಿದೆ. "ಎಸ್‌ಐಐನ ಕಡ್ಡಾಯವಾದ ಕೋವಿಡ್ ಪರೀಕ್ಷೆಯನ್ನು ಅವರು ತೆಗೆದುಕೊಂಡ ನಂತರ ಈ ವರದಿ ಬಂದಿದ್ದು  ಆದರೆ ಕಿರಣ್ ಹಾಗೂ ಸಿಕ್ಕಿ ರೆಡ್ಡಿ ಇಬ್ಬರಿಗೂ ಯಾವ ರೋಗ ಲಕ್ಷಣಗಳಿಲ್ಲ.

ಇದೀಗ ಸಿಕ್ಕಿ ರೆಡ್ಡಿಯವರಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಎಸ್‌ಎಐ ಅವರ ಎಲ್ಲಾ ಪ್ರಾಥಮಿಕ ಸಂಪರ್ಕಿತರ  ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಿದೆ,  ಇದರಲ್ಲಿ ಸಾಯಿ ಪ್ರಣೀತ್ ಮತ್ತು ಪಿ.ವಿ ಸಿಂಧು ಅವರಂತಹ ಖ್ಯಾತನಾಮರೂ ಸಹ ಸೇರಬಹುದಾಗಿದೆ, ಏಕೆಂದರೆ ಈ ಇಬ್ಬರೂ ಸಹ ಸಿಕ್ಕಿ ರೆಡ್ಡಿಯವರೊಡನೆ ಪ್ರಾಥಮಿಕ ಸಂಪರ್ಕದಲ್ಲಿದ್ದರು. "ಸಿಕ್ಕಿ ಮತ್ತು ಕಿರಣ್ ಅವರ ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು ಕಂಡುಹಿಡಿಯಲಾಗಿದೆ ಮತ್ತು ಅವರಿಗೆ ಮತ್ತೆ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗುವುದು. " ಎಂದು ಎಸ್ಎಐ ಪ್ರಕಟಣೆ ಹೇಳಿದೆ,

ಅಲ್ಲದೆ ನೈರ್ಮಲ್ಯದ ಉದ್ದೇಶದಿಂದ ಅಕಾಡಮಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ, ಮುಖ್ಯ ರಾಷ್ಟ್ರೀಯ ತರಬೇತುದಾರ ಪುಲ್ಲೆಲಾ ಗೋಪಿಚಂದ್ ಪ್ರಲಟಣೆಯಲ್ಲಿನ ಅಂಶವನ್ನು ಉಲ್ಲೇಖಿಸಿ ಅಕಾಡಮಿಗೆ ಮತ್ತೆ ಆಟಗಾರರನ್ನುತರಬೇತಿಗೆ ಕರೆತರುವ ಮೊದಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com