ಬಾರ್ಸಿಲೋನಾಗೆ  ವಿದಾಯ ಹೇಳಲು ತಯಾರಾದ ವಿಶ್ವಶ್ರೇಷ್ಠ ಫುಟ್ಬಾಲ್  ಸ್ಟಾರ್ ಮೆಸ್ಸಿ

ಸುಮಾರು ಎರಡು ದಶಕಗಳ ಕಾಲ ಬಾರ್ಸಿಲೋನಾ ಕ್ಲಬ್ ಗಾಗಿ ಆಡಿದ್ದ ಜಾಗತಿಕ ಶ್ರೇಷ್ಠ ಫುಟ್ಬಾಲ್ ಆಟಗಾರ  ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ ಗೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ.

Published: 26th August 2020 12:35 PM  |   Last Updated: 26th August 2020 12:35 PM   |  A+A-


ಲಿಯೋನೆಲ್ ಮೆಸ್ಸಿ

Posted By : Raghavendra Adiga
Source : Associated Press

ಬಾರ್ಸಿಲೋನಾ: ಸುಮಾರು ಎರಡು ದಶಕಗಳ ಕಾಲ ಬಾರ್ಸಿಲೋನಾ ಕ್ಲಬ್ ಗಾಗಿ ಆಡಿದ್ದ ಜಾಗತಿಕ ಶ್ರೇಷ್ಠ ಫುಟ್ಬಾಲ್ ಆಟಗಾರ  ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ ಗೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ.

ಅರ್ಜೆಂಟೀನಾದ ಶ್ರೇಷ್ಠ ಆಟಗಾರ ಮೆಸ್ಸಿ ಕ್ಲಬ್ ತಿರೆಯುವ ಬಯಕೆ ವ್ಯಕ್ತಪಡಿಸಿದ್ದು ಅದರ ಸಂಬಂಧ ಪತ್ರದ ದಾಖಲೆ ಕಳಿಸಿದ್ದಾಗಿ ಕ್ಲಬ್ ಸ್ವತಃ ಒಪ್ಪಿಕೊಂಡಿದೆ.

ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ನಲ್ಲಿ ಬಾರ್ಸಿಲೋನಾ ಬೇಯರ್ನ್ ಮ್ಯೂನಿಚ್ ವಿರುದ್ಧ 8-2 ಅಂತರದಿಂದ ಸೋಲನುಭವಿಸಿದ 11 ದಿನಗಳ ನಂತರ ಈ ಹೇಳಿಕೆ ಹೊರಬಿದ್ದಿದೆ. ಇದು ಆಟಗಾರನ ವೃತ್ತಿಜೀವನದಲ್ಲಿ ಮತ್ತು ಕ್ಲಬ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಸೋಲಿನಲ್ಲಿ ಒಂದಾಗಿದೆ. ಈ ಸೋಲು ಬಾರ್ಸಿಲೋನಾಗೆ ಕಠಿಣ ಸಮಯವನ್ನು ನೀಡಿದೆ.  2007-08ರ ನಂತರ ಪ್ರಶಸ್ತಿ ಜಯಿಸದ ಮೊದಲ ವರ್ಷ ಇದಾಗಿದ್ದು  ಇದು ಕ್ಲಬ್ ನಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದೆ.

33 ವರ್ಷದ ಮೆಸ್ಸಿ ಬಾರ್ಸಿಲೋನಾದಲ್ಲಿ ವಿಶ್ವದ ಅಗ್ರ ಆಟಗಾರನಾಗಿ ದಾಖಲೆಯ ಆರು ಬ್ಯಾಲನ್ ಡಿ ಓರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಲ್ಲದೆ  ಕ್ಲಬ್ 10 ಸ್ಪ್ಯಾನಿಷ್ ಲೀಗ್ ಪ್ರಶಸ್ತಿಗಳನ್ನು ಮತ್ತು ನಾಲ್ಕು ಚಾಂಪಿಯನ್ಸ್ ಲೀಗ್ ಕಿರೀಟಗಳನ್ನು ಗೆಲ್ಲಲು ನೆರವಾಗಿದ್ದಾರೆ.

ಆದಾಗ್ಯೂ, ಕ್ಲಬ್‌ನಿಂದ ನಿರ್ಗಮಿಸುವ ಅವರ ನಿರ್ಧಾರಈಗ ಅವರ ಒಪ್ಪಂದದ ಷರತ್ತಿನ ಮೇಲೆ ಎರಡೂ ಕಡೆಯವರ ನಡುವೆ ಕಾನೂನು ಹೋರಾಟಕ್ಕೆ ಕಾರಣವಾಗಬಹುದು. ಬಾರ್ಸಿಲೋನಾ ಕ್ಲಬ್ ಗೆ ಮೆಸ್ಸಿ ಕಳುಹಿಸಿದ ದಾಖಲೆಗಳು ಈ ಋತುವಿನ ಕೊನೆಯಲ್ಲಿತನ್ನನ್ನು ಬಿಡುಗಡೆ ಮಾಡಲು  ಅವಕಾಶ ನೀಡುವ ಷರತ್ತನ್ನು ಉಲ್ಲೇಖಿಸಿದೆ ಎಂದು ಹೇಳಿದೆ. ಆದಾಗ್ಯೂ, ಆ ಷರತ್ತನ್ನು ಮಾನ್ಯ ಮಾಡುವ  ಗಡುವು ಜೂನ್‌ನಲ್ಲಿ ಮುಕ್ತಾಯಗೊಂಡಿದೆ ಮತ್ತು ಈಗ ಈ ಕುರಿತಂತೆ ಕ್ಲಬ್ ಕಾನೂನು ಸಲಹೆ ಪಡೆಯಲಿದೆ ಎಂದು ವರದಿಯಾಗಿದೆ.

ಸ್ಪ್ಯಾನಿಷ್ ಋತುವು ಮಾನ್ಯವಾಗಿ ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿತ್ತು ಆದರೆ ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಹಿಂದಕ್ಕೆ ತಳ್ಳಲಾಯಿತು. 

Stay up to date on all the latest ಕ್ರೀಡೆ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp