ಭಾರತ ಅಥ್ಲೆಟಿಕ್ಸ್ ತಂಡದ ಮುಖ್ಯ ಕೋಚ್ ಆಗಿ ರಾಧಾಕೃಷ್ಣನ್ ನಾಯರ್ ನೇಮಕ

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ(ಎಎಫ್‌ಐ) ರಾಧಾಕೃಷ್ಣನ್ ನಾಯರ್ ಅವರನ್ನು ಭಾರತ ಅಥ್ಲೆಟಿಕ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.
ರಾಧಾಕೃಷ್ಣನ್ ನಾಯರ್
ರಾಧಾಕೃಷ್ಣನ್ ನಾಯರ್

ನವದೆಹಲಿ: ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ(ಎಎಫ್‌ಐ) ರಾಧಾಕೃಷ್ಣನ್ ನಾಯರ್ ಅವರನ್ನು ಭಾರತ ಅಥ್ಲೆಟಿಕ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. 

ರಾಧಾಕೃಷ್ಣನ್ ಅವರನ್ನು ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಲು ಭಾರತ ಕ್ರೀಡಾ ಪ್ರಾಧಿಕಾರ ಅನುಮೋದನೆ ನೀಡಿದೆ.

ಮಾಜಿ ತಂಡದ ತರಬೇತುದಾರ ಬಹದ್ದೂರ್ ಸಿಂಗ್ ಈ ವರ್ಷದ ಜುಲೈನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದಾಗಿನಿಂದ 62 ವರ್ಷದ ರಾಧಾಕೃಷ್ಣನ್ ಅವರು ಮುಖ್ಯ ಕೋಚ್ ಆಗಿದ್ದಾರೆ. 

ಹೊಸ ತರಬೇತುದಾರರು ಭಾರತೀಯ ಅಥ್ಲೆಟಿಕ್ಸ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಎಎಫ್‌ಐ ಅಧ್ಯಕ್ಷ ಆದಿಲ್ ಜೆ. ಸುಮರಿವಾಲಾ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com