ಬೆಂಗಳೂರು: ಟಿಸಿಎಸ್ ವರ್ಲ್ಡ್ 10 ಕೆ ಓಟದಲ್ಲಿ ಭಾಗವಹಿಸಿ 62 ನಿಮಿಷಗಳಲ್ಲಿ ಗುರಿ ತಲುಪಿದ 5 ತಿಂಗಳ ಗರ್ಭಿಣಿ!

ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು 2020 ನಲ್ಲಿ ಐದು ತಿಂಗಳ ಗರ್ಭಿಣಿ ಮಹಿಳೆ ಕೇವಲ 62 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ. 
ಬೆಂಗಳೂರು: ಟಿಸಿಎಸ್ ವರ್ಲ್ಡ್ 10 ಕೆ ಓಟದಲ್ಲಿ ಭಾಗವಹಿಸಿ 62 ನಿಮಿಷಗಳಲ್ಲಿ ಗುರಿ ತಲುಪಿದ 5 ತಿಂಗಳ ಗರ್ಭಿಣಿ!

ಬೆಂಗಳೂರು: ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು 2020 ನಲ್ಲಿ ಐದು ತಿಂಗಳ ಗರ್ಭಿಣಿ ಮಹಿಳೆ ಕೇವಲ 62 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ಭಾನುವಾರ ನಡೆದ ಟಿಸಿಎಸ್ ವರ್ಲ್ಡ್ 10 ಕೆ ಓಟದಲ್ಲಿ ಅಂಕಿತಾ ಗೌರ್ ಎಂಬ ಮಹಿಳೆ ಈ ಸಾಧನೆ ಮಾಡಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ನಿಯಮಿತವಾಗಿ ಓಟದಲ್ಲಿ ಭಾಗವಹಿಸುತ್ತಿದ್ದ ಅಂಕಿತಾ,ಗೆ ಓಟವು ತನ್ನ ಉಸಿರಾಟದಷ್ಟು ಸಹಜವಾಗಿದೆ. "ಇದು ಕಳೆದ ಒಂಬತ್ತು ವರ್ಷಗಳಿಂದ ನಾನು ಮಾಡುತ್ತಿರುವ ಪ್ರಯತ್ನದ ಫಲ, ಬಹುತೇಕ ಪ್ರತಿದಿನ. ಬೆಳಿಗ್ಗೆ ನಾನು ಓಡುತ್ತೇನೆ. ನಾನು ಒಂಬತ್ತು ವರ್ಷಗಳಿಂದ ನಿಯಮಿತವಾಗಿ ಓಡುತ್ತಿದ್ದೇನೆ, ಆದ್ದರಿಂದ ಇದು ನನಗೆ ಉಸಿರಾಟದಷ್ಟು ಸಹಜವಾಗಿದೆ. ಓಡುವುದು ನಿಜಕ್ಕೂ ತುಂಬಾ ಸುರಕ್ಷಿತವಾಗಿದೆ. ಅದರಲ್ಲಿಯೂ ಗರ್ಭಿಣಿಯಾಗಿ ಓಡುವುದು ಉತ್ತಮ ವ್ಯಾಯಾಮ. ಅಲ್ಲದೆ, ನೀವು ಅಮೇರಿಕನ್ ಕೌನ್ಸಿಲ್ ಆಫ್ ಹೆಲ್ತ್ ಅನ್ನು ಒಪ್ಪುವಿರಾದರೆ ಗರ್ಭಿಣಿಯು ಓಟಗಾರ್ತಿಯಾದರೆ ಅದು ಅತ್ಯುತ್ತಮ ಬೆಳವಣಿಗೆ ಎಂದು ಹೇಳಲಾಗಿದೆ"

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಅಂಕಿತಾ 2013 ರಿಂದ ಟಿಸಿಎಸ್ ವರ್ಲ್ಡ್ 10 ಕೆನಲ್ಲಿ ಭಾಗವಹಿಸುತ್ತಿದ್ದಾರೆ.

ಅವರು ಬರ್ಲಿನ್ (ಮೂರು ಬಾರಿ), ಬೋಸ್ಟನ್, ಮತ್ತು ನ್ಯೂಯಾರ್ಕ್‌ನಂತಹ ಐದು-ಆರು ಅಂತರರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ.

ಈ ವರ್ಷದ ಈವೆಂಟ್‌ಗೆ ಅವರು ಹೇಗೆ ತಯರಾಗಿದ್ದರೆಂದು ಕೇಳಿದಾಗ "ನಾನು ನಿಧಾನವಾಗಿ 5-8 ಕಿ.ಮೀ.ನಂತೆ ನಿಯಮಿತವಾಗಿ ಓಡುವುದನ್ನು ಅಭ್ಯಾಸ ಮಾಡಿದೆ. ವಿರಾಮಗಳನ್ನು ತೆಗೆದುಕೊಳ್ಳುವ ಮೂಲಕವೂ ಓಡುವುದು, ನಡೆಯುವುದು ನನ್ನ ಹವ್ಯಾಸಈಗ ನಾನು ಐದು ತಿಂಗಳ ಗರ್ಭಿಣಿಯಾಗಿದ್ದೇನೆ, ಆದ್ದರಿಂದ ನನ್ನ ದೇಹವು ಈ ಮೊದಲಿಗೆ ಹೋಲಿಸಿದರೆ ಬಹಳ ವಿಭಿನ್ನವಾಗಿದೆ. ಈ ಮೊದಲು ನಾನು ಟಿಸಿಎಸ್ 10 ಕೆ ಯಲ್ಲಿ ಪದಕಗಳನ್ನು ಗೆದ್ದಿದ್ದೇನೆ, ಆದರೆ ಈ ಬಾರಿ ನಾನು ವಿರಾಮಗಳನ್ನು ತೆಗೆದುಕೊಂಡೆ.

"ಟಿಸಿಎಸ್ ವರ್ಲ್ಡ್ 10 ಕೆ ಯಲ್ಲಿ ಭಾಗವಹಿಸುವ ನಿರ್ಧಾರಕ್ಕೆ ಸ್ತ್ರೀರೋಗತಜ್ಞರ ಪ್ರತಿಕ್ರಿಯೆ ಬಗ್ಗೆ ಹೇಳಬೇಕೆಂದರೆ ದು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದು ನನ್ನ ವೈದ್ಯರು ಹೇಳಿದ್ದಾರೆ. ವಾಸ್ತವವಾಗಿ, ಅವರು ನನಗೆ ಈ ಓಟದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ವೇಗವಾಗಿ ಓಡಬಾರದೆಂದು ಅವರು ನನಗೆ ಸಲಹೆ ನೀಡಿದರು. ಕಳೆದ ಮೂರು ವರ್ಷಗಳಿಂದ ನನ್ನೊಂದಿಗೆ ಇರುವ ನನ್ನ ಫಿಸಿಯೋಥೆರಪಿಸ್ಟ್ ಸಹ ನಿಧಾನಗತಿಯ ಓಟಕ್ಕೆ ನನ್ನನ್ನು ಪ್ರೋತ್ಸಾಹಿಸಿದನು ಏಕೆಂದರೆ ಅದು ನನಗೆ ನಿಜವಾಗಿಯೂ ಆರೋಗ್ಯಕರವಾಗಿದೆ,"

"ಆರಂಭದಲ್ಲಿ, ನನ್ನ ತಾಯಿಗೆ ಇದರ ಬಗ್ಗೆ ಸ್ವಲ್ಪ ಖಚಿತತೆ ಇರಲಿಲ್ಲ. ಕ್ರೀಡೆಯೊಂದಿಗೆ ಮುಂದುವರಿಯಲು ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸಿದ್ದಾರೆ ಆದರೆ ಈ ಸಮಯದಲ್ಲಿ ವೈದ್ಯರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ನಾನು ಅವಳಿಗೆ ಹೇಳಿದ ನಂತರ ಅವಳು ಅದಕ್ಕೆ ಸಂಪೋರ್ಣ ಸಮ್ಮತಿ ನೀಡಿದ್ದಳು. ನನ್ನ ತಂದೆ ಸೂಪರ್ ಸಪೋರ್ಟಿವ್, ನಾನು ಇನ್ನೂ ಓಡುತ್ತಿದ್ದೇನೆ ಎಂದು ಅವರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ. ಅವರೂ ಸಹ ಸ್ವತಃ ಕ್ರೀಡಾಪಟುವಾಗಿರುವುದರಿಂದ ನನಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನನ್ನ ಪತಿ ಸಹ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಅವರು ಯಾವಾಗಲೂ ನನ್ನೊಡನೆ ಇದ್ದಾರೆ. ನಾವು ವೈದ್ಯರನ್ನು ಕೇಳಲು ಹೋದಾಗಲೂ ಅವರು ನನ್ನೊಂದಿಗೆ ಇದ್ದರು. ಹಾಗಾಗಿ ನಾನು ತುಂಬಾ ಅದೃಷ್ಟಶಾಲಿ"  ಅಂಕಿತಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com