ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಭಜರಂಗ್ ಪುನಿಯಾ ಸೇರಿದಂತೆ ನಾಲ್ವರು ಫೈನಲ್ ಗೆ

ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸ್ಟಾರ್‌ ಕುಸ್ತಿಪಟು ಭಜರಂಗ್‌ ಪುನಿಯಾ, ರವಿ ದಹಿಯಾ ಸೇರಿದಂತೆ ನಾಲ್ವರು ಭಾರತೀಯರು  ಶನಿವಾರ ವಿವಿಧ ವಿಭಾಗಗಳಲ್ಲಿ ಫೈನಲ್ ತಲುಪುವ ಮೂಲಕ ಬೆಳ್ಳಿ ಪದಕಗಳನ್ನು ಖಚಿತ ಪಡಿಸಿಕೊಂಡಿದ್ದಾರೆ.

Published: 22nd February 2020 08:31 PM  |   Last Updated: 22nd February 2020 08:52 PM   |  A+A-


BajrangPunia1

ಭಜರಂಗ್‌ ಪುನಿಯಾ

Posted By : Nagaraja AB
Source : UNI

ನವದೆಹಲಿ: ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸ್ಟಾರ್‌ ಕುಸ್ತಿಪಟು ಭಜರಂಗ್‌ ಪುನಿಯಾ, ರವಿ ದಹಿಯಾ ಸೇರಿದಂತೆ ನಾಲ್ವರು ಭಾರತೀಯರು  ಶನಿವಾರ ವಿವಿಧ ವಿಭಾಗಗಳಲ್ಲಿ ಫೈನಲ್ ತಲುಪುವ ಮೂಲಕ ಬೆಳ್ಳಿ ಪದಕಗಳನ್ನು ಖಚಿತ ಪಡಿಸಿಕೊಂಡಿದ್ದಾರೆ.

ಸತ್ಯವರ್ಥ್ ಕಡಿಯನ್ (97 ಕೆ.ಜಿ) ಹಾಗೂ ಗೌರವ್‌ ಬಲಿಯನ್ (79 ಕೆ.ಜಿ) ಅವರು ಕೂಡ ಬೆಳ್ಳಿ ಪದಕವನ್ನು ಉಳಿಸಿಕೊಂಡಿದ್ದಾರೆ. ಆದರೆ, ನವೀನ್‌(70 ಕೆಜಿ) ಅವರು ಸೆಮಿಫೈನಲ್‌ ಹಣಾಹಣಿಯಲ್ಲಿ ಉಜ್ಬೀಕಿಸ್ತಾನದ ಮಿಹಿರ್‌ಜಾನ್‌ ಅಶೀರೋವ್ ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

65 ಕೆ.ಜಿ ವಿಭಾಗದಲ್ಲಿ ಭಜರಂಗ್‌ ಪುನಿಯಾ ತಮ್ಮ ತಾಂತ್ರಿಕ ಆಟದಿಂದ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರು. ಏಷ್ಯಾ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಭಜರಂಗ್‌ ಪೂನಿಯಾ 11-0 ಅಂತರದಲ್ಲಿ ತಜಿಕಸ್ತಾನ್‌ನ ಶರಿಪೋವ್ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ್ದಾರೆ. ಆ ಮೂಲಕ ಬೆಳ್ಳಿ ಪದಕವನ್ನು ಉಳಿಸಿಕೊಂಡಿದ್ದಾರೆ.

Stay up to date on all the latest ಕ್ರೀಡೆ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp