ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಪ್ರಧಾನಿ ಚಾಲನೆ: ಟೋಕಿಯೋದಲ್ಲಿ ಹೆಚ್ಚು ಪದಕ ನಿರೀಕ್ಷೆ - ನರೇಂದ್ರ ಮೋದಿ

ದೇಶದ ಪ್ರಪ್ರಥಮ ವಿಶ್ವವಿದ್ಯಾಲಯ ಹಂತದ ರಾಷ್ಟ್ರಮಟ್ಟದ ಬೃಹತ್ ಕ್ರೀಡಾಕೂಟ ಇಂದಿನಿಂದ ಒಡಿಶಾದಲ್ಲಿ ಆರಂಭವಾಗಿದ್ದು, ಮಾರ್ಚ್ 1ರವರೆಗೆ ನಡೆಯಲಿದೆ. 
ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಪ್ರಧಾನಿ ಚಾಲನೆ: ಟೋಕಿಯೋದಲ್ಲಿ ಹೆಚ್ಚು ಪದಕ ನಿರೀಕ್ಷೆ - ನರೇಂದ್ರ ಮೋದಿ

ಕಟಕ್: ದೇಶದ ಪ್ರಪ್ರಥಮ ವಿಶ್ವವಿದ್ಯಾಲಯ ಹಂತದ ರಾಷ್ಟ್ರಮಟ್ಟದ ಬೃಹತ್ ಕ್ರೀಡಾಕೂಟ ಇಂದಿನಿಂದ ಒಡಿಶಾದಲ್ಲಿ ಆರಂಭವಾಗಿದ್ದು, ಮಾರ್ಚ್ 1ರವರೆಗೆ ನಡೆಯಲಿದೆ.

ಕಟಕ್‌ನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಭವ್ಯ ಮತ್ತು ವರ್ಣರಂಜಿತ ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದೇಶದ ಕ್ರೀಡಾ ಕ್ಷೇತ್ರದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರಕ್ಕೆ ಹೆಚ್ಚು ಪದಕ ತಂದು ಕೊಡುವ ನಿರೀಕ್ಷೆಯಿದೆ ಎಂದರು. 

"ಇಂದು ಒಡಿಶಾದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಲಾಗಿದೆ. ಇದು ಭಾರತೀಯ ಕ್ರೀಡೆಗಳಲ್ಲಿ ಒಂದು ಐತಿಹಾಸಿಕ ಕ್ಷಣ ಮಾತ್ರವಲ್ಲ, ಭಾರತೀಯ ಕ್ರೀಡೆಗಳ ಭವಿಷ್ಯದ ಒಂದು ದೊಡ್ಡ ಹೆಜ್ಜೆಯಾಗಿದೆ" ಎಂದು ಮೋದಿ ಹೇಳಿದ್ದಾರೆ. 

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟವು ಯುವ ಕ್ರೀಡಾಪಟುಗಳಿಗೆ ತಮ್ಮ ಕನಸುಗಳನ್ನು ಈಡೇರಿಸಲು ದೊಡ್ಡ ವೇದಿಕೆಯನ್ನು ಒದಗಿಸುತ್ತದೆ ಎಂದು ಮೋದಿ ಹೇಳಿದರು."ಮುಂದಿನ ದಿನಗಳಲ್ಲಿ, ನೀವು 200 ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದೀರಿ. ನಿಮ್ಮ ಪ್ರದರ್ಶನವನ್ನು ಉತ್ತಮಗೊಳಿಸುವ ಅವಕಾಶ ನಿಮಗೆ ಒದಗಿದೆ. , ನಿಮ್ಮ ಸಾಮರ್ಥ್ಯದಿಂಡ ಹೊಸ ಎತ್ತರಕ್ಕೇರಲು  ನಿಮಗೆ ಅವಕಾಶವಿದೆ" ಎಂದು ಅವರು ಹೇಳಿದರು.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಮತ್ತು ಕೇಂದ್ರಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು

ಈ ಕುಟದಲ್ಲಿ ಆರು ತಂಡಗಳ ಈವೆಂಟ್‌ಗಳಲ್ಲಿ ರಗ್ಬಿ ಸೇರಿದಂತೆ 17 ವಿಭಾಗಗಳಲ್ಲಿ ದೇಶಾದ್ಯಂತ 159 ವಿಶ್ವವಿದ್ಯಾಲಯಗಳ 3400 ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com