ಟೆನಿಸ್ ಗೆ ಗುಡ್ ಬೈ ಎಂದ ಶರಪೋವಾ!

ಐದು ಬಾರಿಯ ಗ್ರ್ಯಾಂಡ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿ ವಿಜೇತೆ ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ, ತಮ್ಮ ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. 
ಮರಿಯಾ ರಪೋವಾ
ಮರಿಯಾ ರಪೋವಾ

ಪ್ಯಾರೀಸ್: ಐದು ಬಾರಿಯ ಗ್ರ್ಯಾಂಡ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿ ವಿಜೇತೆ ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ, ತಮ್ಮ ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ.

ವಿಶ್ವದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದ ಶರಪೋವಾ"ಟೆನಿಸ್ - ನಾನು ವಿದಾಯ ಹೇಳುತ್ತಿದ್ದೇನೆ" ಎಂದು ವೋಗ್ ಮತ್ತು ವ್ಯಾನಿಟಿ ಫೇರ್ ನಿಯತಕಾಲಿಕೆಗಳ ಲೇಖನದಲ್ಲಿ ಹೇಳಿದ್ದಾರೆ.

"28 ವರ್ಷಗಳು ಮತ್ತು ಐದು ಗ್ರ್ಯಾಂಡ್ ಸ್ಲ್ಯಾಮ್ ಬಳಿಕ ನಾನು ಇನ್ನೊಂದು ಶಿಖರವನ್ನೇರಲು ಸಿದ್ದವಾಗಿದ್ದೇನೆ, ಸಂಪೂರ್ಣ ಬೇರೆಯದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಲಲು ಸಜ್ಜಾಗುತ್ತಿದ್ದೇನೆ" ಅವರು ಹೇಳಿದ್ದಾರೆ.

2016 ರ ಆಸ್ಟ್ರೇಲಿಯನ್ ಓಪನ್‌ನ ಸಮಯದಲ್ಲಿ ಗ್ಸ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ 15 ತಿಂಗಳ ನಿಷೇಧವನ್ನು ವಿಧಿಸುವ ಮೊದಲು ಶರಪೋವಾ ಅತ್ಯಂತ ಪ್ರತಿಭಾನ್ವಿತ ಆಟಗಾರ್ತಿಯೆಂದು ಗುರುತಿಸಿಕೊಂಡಿದ್ದರು.ರಷ್ಯಾದ ಮಾಜಿ ವಿಶ್ವ ನಂಬರ್ ಒನ್ ಆಟಗಾರ್ತಿ  ಪ್ರಸ್ತುತ 373 ನೇ ಶ್ರೇಯಾಂಕಿತೆಯಾಗಿದ್ದಾರೆ.ದೀರ್ಘಕಾಲದ ಭುಜದ ನೋವಿನ ಸಮಸ್ಯೆಯಿಂದಾಗಿ ಶರಪೋವಾ ಕಳೆದ ವರ್ಷದಲ್ಲಿ ಅಷ್ಟೇನೂ ಆಡಲಿಲ್ಲ.ವಿಂಬಲ್ಡನ್, ಯುಎಸ್ ಓಪನ್ ಮತ್ತು ಇತ್ತೀಚೆಗೆ ಮೆಲ್ಬೋರ್ನ್ ನಲ್ಲಿ ನಡೆದ  ಆಸ್ಟ್ರೇಲಿಯನ್ ಓಪನ್ ನಲ್ಲಿ ನಡೆದ ಮೊದಲ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದರು.

ಸೈಬೀರಿಯಾ ಮೂಲದ ಶರಪೋವಾ ಮೊದಲ ಬಾರಿಗೆ ತನ್ನ ನಾಲ್ಕನೇ ವಯಸ್ಸಿನಲ್ಲಿ  ಸೋಚಿಯಲ್ಲಿ ಟೆನಿಸ್ ರ್ಯಾಕೆಟ್ ಕೈಗೆತ್ತಿಕೊಂಡರು.ಅಲ್ಲಿ 1986 ರ ಚೆರ್ನೋಬಿಲ್ ದುರಂತದಿಂದ ಪಾರಾದ ಬಳಿಕ  ಆಕೆ ಬೆಲಾರಸ್ ಮೂಲದ ಪೋಷಕರೊಂದಿಗಿದ್ದರು.

2004 ರಲ್ಲಿ ತಮ್ಮ 17ನೇ ವರ್ಷಕ್ಕೆ ವಿಂಬಲ್ಡನ್ ಗೆದ್ದು ಖ್ಯಾತಿ ಪಡೆದ ಶರಪೋವಾ ಇಂಗ್ಲೆಂಡ್ ಕ್ಲಬ್‌ನ ಹುಲ್ಲಿನ ಅಂಕಣಗಳನ್ನು ಗೆದ್ದ ಮೂರನೆಯ ಕಿರಿಯ ಆಟಗಾರ್ತಿ. 2005 ರಲ್ಲಿ 18 ನೇ ವಯಸ್ಸಿನಲ್ಲಿ ವಿಶ್ವ ನಂಬರ್ ಒನ್ ಆದರು ಮತ್ತು ಮುಂದಿನ ವರ್ಷ ಯುಎಸ್ ಓಪನ್ ಗೆದ್ದರು."ನನ್ನ ಯಶಸ್ಸಿನ ಒಂದು ಕೀಲಿಯೆಂದರೆ, ನಾನು ಹಿಂದೆ ಮುಂದೆ ನೋಡಲಿಲ್ಲ ಮತ್ತು ನಾನೆಂದಿಗೂ ಗೆಲುವಿಗಾಗಿ ಎದುರು ನೋಡಿದವಳೂ ಅಲ್ಲ"

 2007 ರಲ್ಲಿ ಅವರಿಗೆ ಭುಜದ ನೋವು ಮೊದಲ ಬಾರಿಗೆ ಕಾಣಿಸಿತ್ತು. ಆ ನೋವಿನಿಂದ ತನ್ನ ಕ್ರೀಡಾಪಯಣ ನಿಲ್ಲಿಸುವ ಮುನ್ನ ಅವರು  2008 ರ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಆದರೆ  ಯುಎಸ್ ಓಪನ್ ಮತ್ತು ಬೀಜಿಂಗ್ ಒಲಿಂಪಿಕ್ಸ್ ನಿಂದ ದೂರ ಉಳಿದರು.2012 ರಲ್ಲಿ,  ಫ್ರೆಂಚ್ ಓಪನ್ ಪ್ರಶಸ್ತಿ ಪಡೆದಿದ್ದ ಈಕೆ ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಸುತ್ತು ಪೂರ್ಣಗೊಳಿಸಿದ 10 ನೇ ಮಹಿಳೆ. ಇದೇ ವರ್ಷ ಆಕೆ ಒಲಂಪಿಕ್ ಬೆಳ್ಳಿ ಪದಕವನ್ನೂ ಗೆದ್ದರು.ಇದಾಗಿ 2014 ರ ಫ್ರೆಂಚ್ ಓಪನ್ ಪ್ರಶಸ್ತಿ 2016ರ ಆಸ್ಟ್ರೇಲಿಯನ್‌ ಓಪನ್‌ ಗೆಲುವು ಅವರ ಮಹತ್ವದ ಸಾಧನೆ. 2016ರ ಆಸ್ಟ್ರೇಲಿಯನ್‌ ಓಪನ್‌ ಬಳಿಕ ತಾವು ಡೋಪಿಂಗ್‌ ನಿಯಮ ಉಲ್ಲಂಘನೆ ಮಾಡಿದ್ದಾಗಿ ಆಕೆ ಖುದ್ದು ಒಪ್ಪಿಕೊಂಡಲು. ಅಲ್ಲದೆ ತಮ್ಮ ದೀರ್ಘಕಾಲೀನ  ಆರೋಗ್ಯ ಸಮಸ್ಯೆಗಾಗಿ ನಿಷೇಧಿತ ಮೆಲ್ಡೋನಿಯಂ ಔಷಧ ಸೇವನೆ ಮಾಡುವುದಾಗಿ ಸಹ ಅವರು ಬಹಿರಂಗಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com