ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿ: ಸೆಮಿಫೈನಲ್ ಗೆ ಸಾನಿಯಾ ಮಿರ್ಜಾ

ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಇಲ್ಲಿ ನಡೆಯುತ್ತಿರುವ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ.

Published: 16th January 2020 02:28 PM  |   Last Updated: 16th January 2020 02:28 PM   |  A+A-


ಸಾನಿಯಾ ಮಿರ್ಜಾ

Posted By : Raghavendra Adiga
Source : UNI

ಹೊಬರ್ಟ್: ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಇಲ್ಲಿ ನಡೆಯುತ್ತಿರುವ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಮಿರ್ಜಾ-ಕಿಚ್ನಾಕ್ ಜೋಡಿಯು 6-2, 4-6 (10-4) ಅಂತರದಲ್ಲಿ ವ್ಯಾನಿಯಾ ಹಾಗೂ ಕ್ರಿಸ್ಟಿನಾ ಮೆಕ್ ಹ್ಯಾಲೆ ಅಮೆರಿಕ ಜೋಡಿಯ ವಿರುದ್ಧ ಗೆಲುವಿನ ನಗೆ ಬೀರಿತು. 2017ರ ಬಳಿಕ ಟೆನಿಸ್ ಗೆ ಮರಳಿರುವ ಸಾನಿಯಾ ಮಿರ್ಜಾ ಅವರಿಗೆ ಇದು ಸತತ ಎರಡನೇ ಗೆಲುವಾಯಿತು.

ಸಾನಿಯಾ ಮಿರ್ಜಾ ಹಾಗೂ ಕಿಚ್ನಾಕ್ ಅವರ ಮೊದಲ ಪಂದ್ಯದಿಂದಲೂ ಗ್ಯಾಲರಿಯಲ್ಲಿ ಭಾರತದ ಆಟಗಾರ್ತಿಯ ಮಗ ಇಝಾನ್ ಕಾಣಿಸಿಕೊಂಡಿದ್ದಾರೆ. ಮೊದಲನೇ ಪಂದ್ಯದಲ್ಲಿ ಈ ಜೋಡಿಯು ಒಕ್ಸಾನ ಕಲಸ್ನಿಕೋವಾ ಮತ್ತು ಮಿಯು ಕಟೊ ಜೋಡಿಯ ವಿರುದ್ಧ 2-6, 7-6(3) (10-3) ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp