ಸರ್ಫಿಂಗ್ ಸಿಇಒ! ಕೆಲಸದ ಒತ್ತಡ ಕಳೆಯಲು ಸಮುದ್ರಕ್ಕಿಳಿದವನ ರೋಚಕ ಕಹಾನಿ

ಮಯೂಖ್ ಚೌಧರಿ ತ್ರಿಪುರದಲ್ಲಿ ಜನಿಸಬಹುದು ಆದರೆ ಅವರ ಜೀವನದ ಬಹುಪಾಲು ನೀರಿನಲ್ಲೇ ಕಳೆದಿದೆ. ಇವರು ಈಜಿನಲ್ಲಿ ಅತ್ಯಂತ ಹೆಚ್ಚು ಆಸಕ್ತಿ ಹೊಂದಿದ್ದು ಮಾತ್ರವಲ್ಲ ತಮ್ಮದೇ ಶಿಕ್ಷಣ ಸಂಸ್ಥೆಯ ವಾಟರ್ ಪೋಲೊ ತಂಡದ ಮಾಜಿ ಕ್ಯಾಪ್ಟನ್ ಕೂಡ ಹೌದು. ಇಂತಹಾ ವ್ಯಕ್ತಿ ಈಜಿನಿಂದ ಸರ್ಫಿಂಗ್ ನತ್ತ ದೃಷ್ಟಿ ಹರಿಸಿದ್ದು ಅದೇನೂ ವಿಶೇಷವಾಗಿರಲಿಲ್ಲ.

Published: 28th January 2020 11:52 AM  |   Last Updated: 28th January 2020 11:52 AM   |  A+A-


ಮಯುಖ್ ಚೌಧರಿ

Posted By : Raghavendra Adiga
Source : The New Indian Express

ಬೆಂಗಳೂರು: ಮಯೂಖ್ ಚೌಧರಿ ತ್ರಿಪುರದಲ್ಲಿ ಜನಿಸಬಹುದು ಆದರೆ ಅವರ ಜೀವನದ ಬಹುಪಾಲು ನೀರಿನಲ್ಲೇ ಕಳೆದಿದೆ. ಇವರು ಈಜಿನಲ್ಲಿ ಅತ್ಯಂತ ಹೆಚ್ಚು ಆಸಕ್ತಿ ಹೊಂದಿದ್ದು ಮಾತ್ರವಲ್ಲ ತಮ್ಮದೇ ಶಿಕ್ಷಣ ಸಂಸ್ಥೆಯ ವಾಟರ್ ಪೋಲೊ ತಂಡದ ಮಾಜಿ ಕ್ಯಾಪ್ಟನ್ ಕೂಡ ಹೌದು. ಇಂತಹಾ ವ್ಯಕ್ತಿ ಈಜಿನಿಂದ ಸರ್ಫಿಂಗ್ ನತ್ತ ದೃಷ್ಟಿ ಹರಿಸಿದ್ದು ಅದೇನೂ ವಿಶೇಷವಾಗಿರಲಿಲ್ಲ.

ಪೂರ್ವ ಮಾನ್ಸೂನ್ ಋತುವಿನಲ್ಲಿ ಅತ್ಯುತ್ತಮವಾದುದನ್ನು ಮಾಡುವ ಪ್ರಯತ್ನದಲ್ಲಿ ಅವರೀಗಾಗಲೇ ಮಂಗಳೂರು ಹಾಗೂ ಚೆನ್ನೈನ ಕಡಲ ತೀರಗಳಿಗೆ ಅನೇಕ ಬಾರಿ ಪ್ರವಾಸ ಕೈಗೊಂಡಿದ್ದಾರೆ.

"ಸರ್ಫ್‌ಬೋರ್ಡ್‌ನಲ್ಲಿರಲು ನನ್ನ ಶೇಕಡಾ 100 ರಷ್ಟುಮನಸ್ಥೈರ್ಯ ಬೇಕಿದೆ. ಹಾಗಾಗಿ ಇದು ತಕ್ಷಣ ನನ್ನಲ್ಲಿನ ಇತರೆ ಎಲ್ಲಾ ಗೊಂದಲಗಳನ್ನು ಮರೆಸುತ್ತದೆ" ಎಂದು ಬೆಂಗಳೂರು ಮೂಲದ ಸಹ-ಸಂಸ್ಥಾಪಕ ಮತ್ತು ಮಿಲಾಪ್‌ನ ಸಿಇಒ, ಹೇಳಿದ್ದಾರೆ.

ಮನೆಯ  ಸಣ್ಣ ಕೊಳಗಳಲ್ಲಿ ಈಜುತ್ತಾ ಬೆಳೆದ ಚೌಧರಿ ಅವರ ಕಾಲೇಜು ದಿನಗಳಲ್ಲಿ, ಐಐಟಿ ಚೆನ್ನೈನಲ್ಲಿ ಈಜು ಶಾಟ್ ಗಳು  ಮತ್ತು ತಾಂತ್ರಿಕತೆಗಳ ಬಗ್ಗೆ ಜ್ಞಾನ ಬೆಳೆಸಿಕೊಂಡರು."ವಾಟರ್ ಪೋಲೊ ತಂಡದ ಭಾಗವಾಗಿರುವುದು ಇತರರೊಂದಿಗೆ ಆಳವಾದ ಸ್ನೇಹ ಬೆಳೆಸಲು ನನಗೆ ಸಹಾಯ ಮಾಡಿತು ಮತ್ತು ಇಂದಿಗೂ ನಾನವರ ಸಮ್ಪರ್ಕದಲ್ಲಿದ್ದೇನೆ. 2016ರಲ್ಲಿ ಇವರು ಮೊದಲ ಬಾರಿಗೆ ಸರ್ಫಿಂಗ್ ಬಗ್ಗೆ ಅರಿತುಕೊಂಡರು.2017 ರಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಪ್ರಾರಂಭವಾಗಿದ್ದ ಇವರ ಸರ್ಫಿಂಗ್ ಪ್ರವಾಸ ಮುಂದಿನ ವರ್ಷ ನಿಯಮಿತ ಹವ್ಯಾಸವಾಗಿ ಮಾರ್ಪಟ್ಟಿತು, ಚೌಧರಿ ಭಾರತದಲ್ಲಿ ಮಂಗಳೂರು, ಚೆನ್ನೈ, ಕೋವಲಂ ಮತ್ತು ಪುದುಚೇರಿಗಳಲ್ಲಿ ಸಮುದ್ರದ ಸರ್ಫಿಂಗ್ ನಡೆಸಿದ್ದಾರೆ., ಜೊತೆಗೆ ಶ್ರೀಲಂಕಾ, ಫಿಲಿಪೈನ್ಸ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ಸಹ ತಮ್ಮ ಪ್ರತಿಭೆಯನ್ನು ಪಣಕ್ಕಿಟ್ಟಿದ್ದರು.

ಅವರ ಮೊದಲ ಪ್ರಯತ್ನದ ನಂತರ, ಚೌಧರಿ ಸರ್ಫಿಂಗ್‌ನೊಂದಿಗೆ ತ್ವರಿತ ಸಂಪರ್ಕವನ್ನು ಸಾಧಿಸುವಲ್ಲಿ ಯಶಸ್ವಿಯಾದರು.ಇದು ಅಂತರ್ಗತ ಭಾವನೆ" ಎನ್ನುವ ಅವರು . ಎಷ್ಟರಮಟ್ಟಿಗೆಂದರೆ, ಯಾವುದೇ ವೈಪೌಟ್ (ಸರ್ಫ್‌ಬೋರ್ಡ್‌ನಿಂದ ಬೀಳುವುದು) ಅವರಿಗೆ ಸಮುದ್ರದ ಮೇಲೆ ತಿರುಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಪ್ರತಿ ಪ್ರಯತ್ನವೂ ನನ್ನ ಮುಂದಿನ ಪ್ರಯತ್ನಕ್ಕೆ ಹೆಚ್ಚು ಪುಷ್ಟಿ ಕೊಡುತ್ತಾ ಸಾಗಿತ್ತು.ಅಲೆಗಳನ್ನು ಹಿಡಿಯುವ ಈ ಡ್ರೈವ್ ಅಂತಿಮವಾಗಿ ಅವರನ್ನು ಶ್ರೀಲಂಕಾದ ಮಿರಿಸ್ಸಾ, ವೆಲಿಗಮಾ ಮತ್ತು ಹಿಕ್ಕಡುವಾಗಳಿಗೆ ಆಹ್ವಾನಿಸಿತು.

"ಇದು ಹೆಚ್ಚು ಸುಧಾರಿತ ಮಟ್ಟಕ್ಕೆ ಬಂದಿದ್ದು ಸರ್ಫಿಂಗ್ ಎರೌಂಡ್ ಪ್ರವಾಸಗಳನ್ನು ಯೋಜಿಸಬಹುದೆಂದು ಈ ಪ್ರವಾಸವು ನನಗೆ ಕಲಿಸಿದೆ. ಕೋರಲ್ ಬ್ರೇಕ್ ಗಳನ್ನು ಹೇಗೆ ನಡೆಸಬೇಕೆಂದು ಸಹ ನಾನು ಅರಿತಿದ್ದೇನೆ"

ಇನ್ನು ಚೌಧರಿ ಅವರ  ಕ್ಯಾಲಿಫೋರ್ನಿಯಾ ಪ್ರವಾಸವು ಮೊದಲ ಬಾರಿ ಅವರಿಗೆ ಐಸ್ಕೋಲ್ಡ್ ವಾಟರ್ ನ ಪರಿಚಯ ಕೊಟ್ಟಿತ್ತು.ಅದು ಜೂನ್ ತಿಂಗಳಲ್ಲಿತ್ತು, ಆದ್ದರಿಂದ ಮೋಡವಿಲ್ಲದ  ಆಕಾಶದೊಂದಿಗೆ ಪ್ರಕಾಶಮಾನವಾದ ಬಿಸಿಲಿನ ದಿನವಾಗಿತ್ತು. ಆದರೆ ನೀವು ನೀರಿಗೆ ಹೆಜ್ಜೆ  ಇಟ್ಟದ್ದಾದರೆ ಮಾತ್ರ ಸಾಮಾನ್ಯ ಭೂಮಿಗಿಂತ 30 ಡಿಗ್ರಿ ವ್ಯತ್ಯಾಸವಿತ್ತು”ಎಂದು ಅವರು ವಿವರಿಸುತ್ತಾರೆ, ಅವರು ವರ್ಕಿಂಗ್ ಟೂರ್ ನಲ್ಲಿದ್ದರೂ ಸಹ ಕೆಲವಷ್ಟು ಸಮಯ ಅವರು ಸಮುದ್ರದಲ್ಲಿ ಕಳೆಯಲು ಮನ ಮಾಡಿದ್ದರು."ನನ್ನ ಪಾದಗಳು ಹೆಪ್ಪುಗಟ್ಟುತ್ತವೆ, ತಲೆ ಚಳಿಯಿಂದ ತಣ್ಣಗಾಗುತ್ತದೆ ಆದರೂ ಸಹ  ಅವಕಾಶ ನೀಡಿದರೆ, ನಾನು ಖಂಡಿತವಾಗಿಯೂ ಅದನ್ನು ಮತ್ತೆ ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆಯಿಂದ ಹೇಳಿದ್ದಾರೆ.
 

Stay up to date on all the latest ಕ್ರೀಡೆ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp