ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ

ಚೈನಾ ಬ್ಯಾಡ್ಮಿಂಟನ್ ಸೂಪರ್ ಸ್ಟಾರ್ ೩೬ ವರ್ಷದ ಲಿನ್ ಡಾನ್ ಕ್ರೀಡಾ ಬದುಕಿನಿಂದ ನಿವೃತ್ತಿಯಾಗುತ್ತಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ.
ಲಿನ್ ಡಾನ್
ಲಿನ್ ಡಾನ್

ಬೀಜಿಂಗ್: ಚೈನಾ ಬ್ಯಾಡ್ಮಿಂಟನ್ ಸೂಪರ್ ಸ್ಟಾರ್ ೩೬ ವರ್ಷದ ಲಿನ್ ಡಾನ್ ಕ್ರೀಡಾ ಬದುಕಿನಿಂದ ನಿವೃತ್ತಿಯಾಗುತ್ತಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ.

ಸತತ ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಲಿನ್ ಇತಿಹಾಸ ನಿರ್ಮಿಸಿದ್ದರು. ೨೦೦೮ ಬೀಜಿಂಗ್, ೨೦೧೨ ಲಂಡನ್ ಒಲಿಂಪಿಕ್ಸ್ ನಲ್ಲಿ ಈ ಹೆಗ್ಗಳಿಕೆ ಸಾಧಿಸಿದ್ದರು

ವೃತ್ತಿಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ನನ್ನ ಕುಟುಂಬ, ತರಬೇತುದಾರರು, ತಂಡದ ಸದಸ್ಯರು ಹಾಗೂ ಅಭಿಮಾನಿಗಳು ನನಗೆ ಬೆಂಬಲ ನೀಡಿದ್ದಾರೆ. ಈಗ ನನಗೆ ೩೭ ವರ್ಷ ವಯಸ್ಸಾಗಿರುವ ಕಾರಣ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಇತರ ಕ್ರೀಡಾ ಪಟುಗಳೊಂದಿಗೆ ಆಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ದೇಶದ ಪರವಾಗಿ ಆಡಬೇಕೆಂದು ಭಾವಿಸಿದ್ದೆ. ಆದರೆ ಪ್ರಪಂಚದಾದ್ಯಂತ ಕೊರೋನಾ ಕಾರಣದಿಂದ ಎಲ್ಲ ಕ್ರೀಡಾ ಕೂಟಗಳು ಮುಂದೂಡಿರುವ ಕಾರಣ ಟೋಕಿಯೋ ಒಲಿಂಪಿಕ್ಸ್ ಕನಸು ಕರಗಿ ಹೋಗಿದೆ. ಇಷ್ಟು ದಿನ ನನ್ನನ್ನು ಪ್ರೀತಿಸಿದವರಿಗೆ ಧನ್ಯವಾದಗಳು ಎಂದು ಲಿನ್ ಡಾನ್ ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com