ಅಮಿತ್ ಪಂಘಾಲ್ ವಿಶ್ವದ ನಂ.1 ಬಾಕ್ಸರ್

ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್ ಷಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಾಲ್ ಅಮೆಚೂರ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ನೂತನವಾಗಿ ಬಿಡುಗಡೆ ಮಾಡಿದ ವಿಶ್ವ ರಾಂಕಿಂಗ್ ನ 52 ಕೆ. ಜಿ ವಿಭಾಗದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

Published: 07th July 2020 01:39 AM  |   Last Updated: 07th July 2020 12:25 PM   |  A+A-


Amit_panghal1

ಅಮಿತ್ ಪಂಘಾಲ್

Posted By : nagaraja
Source : UNI

ನವದೆಹಲಿ: ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್ ಷಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಾಲ್ ಅಮೆಚೂರ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ನೂತನವಾಗಿ ಬಿಡುಗಡೆ ಮಾಡಿದ ವಿಶ್ವ Ranking ನ 52 ಕೆ. ಜಿ ವಿಭಾಗದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಈ ಮಹತ್ವದ ಬೆಳವಣಿಗೆಯೊಂದಿಗೆ ಭಾರತೀಯ ಬಾಕ್ಸಿಂಗ್ ವಲಯ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಸುಮಾರು 18 ತಿಂಗಳ ಸುದೀರ್ಘಾವಧಿಯ ಬಳಿಕ ಪುರುಷರ Ranking ಪಟ್ಟಿ ಬಿಡುಗಡೆಯಾಗಿದೆ. 2019ರ ಜನವರಿಯಲ್ಲಿ ಐಬಾ ಕೊನೆಯದಾಗಿ Ranking ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
 
ಈ ವೇಳೆ ಕೇವಲ ಮಹಿಳಾ ಬಾಕ್ಸರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆಗ 2018ರ ನವೆಂಬರ್ ನಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಮಹಿಳಾ ವಿಶ್ವ ಚಾಂಪಿಯನ್ ಷಿಪ್ ನಲ್ಲಿ  ತಮ್ಮ ಐತಿಹಾಸಿಕ ಆರನೇ ಚಿನ್ನದ ಪದಕ ಜಯಿಸಿದ್ದ ಎಂ.ಸಿ. ಮೇರಿ ಕೋಮ್ 48 ಕೆ.ಜಿ. ವಿಭಾಗದಲ್ಲಿ ಮೊದಲ ಸ್ಥಾನಕ್ಕೇರಿದ್ದರು. ಈ ಸಂದರ್ಭದಲ್ಲಿ ಐಬಾ ಪುರುಷರ Ranking ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ.


Stay up to date on all the latest ಕ್ರೀಡೆ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp