ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ರಾಣಿ ರಾಂಪಲ್ ನಾಮನಿರ್ದೇಶನ ಮಾಡಿದ ಹಾಕಿ ಇಂಡಿಯಾ!

ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಲ್ ಅವರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವ ಹಾಕಿ ಇಂಡಿಯಾ, ವಂದನಾ ಕಟಾರಿಯಾ, ಮೊನಿಕಾ ಮತ್ತು ಹರ್ಮನ್ ಪ್ರೀತ್ ಸಿಂಗ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. 

Published: 02nd June 2020 03:58 PM  |   Last Updated: 02nd June 2020 03:58 PM   |  A+A-


Rani_Rampal1

ರಾಣಿ ರಾಂಪಲ್

Posted By : Nagaraja AB
Source : The New Indian Express

ನವದೆಹಲಿ:ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಲ್ ಅವರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವ ಹಾಕಿ ಇಂಡಿಯಾ, ವಂದನಾ ಕಟಾರಿಯಾ, ಮೊನಿಕಾ ಮತ್ತು ಹರ್ಮನ್ ಪ್ರೀತ್ ಸಿಂಗ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. 

ರಾಣಿ ರಾಂಪಲ್ ನಾಯಕತ್ವದಲ್ಲಿನ ಭಾರತ ತಂಡ 2017ರಲ್ಲಿ ಮಹಿಳಾ ಏಷ್ಯಾ ಕಪ್ ಜಯಸಿತ್ತು. 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಹಾಯ ಮಾಡುವ ನಿರ್ಣಾಯಕ ಗುರಿಯನ್ನು ಗಳಿಸುವ ಮೂಲಕ 2019 ರಲ್ಲಿ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.  

ಈ ಅವಧಿಯಲ್ಲಿ ಭಾರತದ ವನಿತೆಯರ ತಂಡ ವಿಶ್ವದ ಅತ್ಯುತ್ತಮ- ನಂಬರ್ 9 ಸ್ಥಾನಕ್ಕೇರಿತ್ತು.ರಾಣಿ ರಾಂಪಲ್ 2016ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 2020ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 

ಸರ್ದಾರ್ ಸಿಂಗ್ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿರುವ ಕೊನೆಯ ಆಟಗಾರ. ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಎಲ್ಲಾ ಅರ್ಹತೆಗಳು ರಾಣಿ ರಾಂಪಲ್ ಅವರಿಗೆ ಇದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್ ಮುಸ್ತಕ್ ಅಹ್ಮದ್ ಹೇಳಿದ್ದಾರೆ. 

Stay up to date on all the latest ಕ್ರೀಡೆ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp