ಹಿರಿಯ ಬಾಸ್ಕೆಟ್ ಬಾಲ್ ಪಟು ರಘುನಾಥ್ ನಿಧನ

ಹಿರಿಯ ಬಾಸ್ಕೆಟ್ ಬಾಲ್ ಆಟಗಾರ ಕೆ.ರಘುನಾಥ್ (74) ಮಂಗಳವಾರ ನಿಧನರಾಗಿದ್ದಾರೆ. ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಕ್ರೀಡಾ ವಲಯದಲ್ಲಿ ಪಾಪಚ್ಚಿ ಎಂದೇ ಹೆಚ್ಚು ಚಿರಪರಿಚಿತರು.
ಕೆ ರಘುನಾಥ್
ಕೆ ರಘುನಾಥ್

ಬೆಂಗಳೂರು: ಹಿರಿಯ ಬಾಸ್ಕೆಟ್ ಬಾಲ್ ಆಟಗಾರ ಕೆ.ರಘುನಾಥ್ (74) ಮಂಗಳವಾರ ನಿಧನರಾಗಿದ್ದಾರೆ. ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಕ್ರೀಡಾ ವಲಯದಲ್ಲಿ ಪಾಪಚ್ಚಿ ಎಂದೇ ಹೆಚ್ಚು ಚಿರಪರಿಚಿತರು.

ಮೃತರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮಲ್ಲೇಶ್ವರದಲ್ಲಿರುವ ಬೀಗಲ್ ಬಾಸ್ಕೆಟ್ ಬಾಲ್ ಕ್ಲಬ್ ನ ಸಂಸ್ಥಾಪಕರಲ್ಲಿ ರಘುನಾಥ್ ಸಹ ಪ್ರಮುಖರಾಗಿದ್ದಾರೆ.

1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ತಂಡಕ್ಕೆ ನಾಯಕರಾಗಿದ್ದ ರಘುನಾಥ್, ತಮ್ಮ ನೇತೃತ್ವದಲ್ಲಿ ತಂಡಕ್ಕೆ ಮೂರು ಬಾರಿ ಚಾಂಪಿಯನ್ ಆಗಿತ್ತು. ರಘುನಾಥ್ ನಿಧನಕ್ಕೆ ರಾಜ್ಯ ಬಾಸ್ಕೆಟ್ ಬಾಲ್ ಸಂಸ್ಥೆ ಹಾಗೂ ಹಿರಿಯ ಹಾಗೂ ಕಿರಿಯ ಆಟಗಾರರು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com