ಎಸ್ಎಐ ನಲ್ಲಿ ಏಕಾಂಗಿ: ಹಾಕಿ ಆಟಗಾರ ಸೂರಜ್ ಕರ್ಕೆರಾಗೆ ಜೊತೆಯಾಗಿವೆ ಪುಸ್ತಕ, ಫೋನ್! 

ಕೋವಿಡ್-19 ಸಾಂಕ್ರಾಮಿಕ ಒಂದಷ್ಟು ಜನರನ್ನು ವಾಪಸ್ ಊರಿಗೆ ತೆರಳಿ ಕುಟುಂಬದವರೊಟ್ಟಿಗೆ ಕಾಲ ಕಳೆಯುವಂತೆ ಮಾಡಿದ್ದರೆ ಮತ್ತೆ ಕೆಲವರನ್ನು ಕುಟುಂಬದವರು ಇರುವ ಪ್ರದೇಶದಿಂದ ದೂರವಾಗಿಸಿ ದಿನ ದೂಡುವುದನ್ನೂ ಕಷ್ಟವನ್ನಾಗಿಸಿದೆ.

Published: 30th June 2020 07:33 PM  |   Last Updated: 30th June 2020 07:33 PM   |  A+A-


Suraj Karkera

ಸೂರಜ್ ಕರ್ಕೆರಾ

Posted By : Srinivas Rao BV
Source : The New Indian Express

ಕೋವಿಡ್-19 ಸಾಂಕ್ರಾಮಿಕ ಒಂದಷ್ಟು ಜನರನ್ನು ವಾಪಸ್ ಊರಿಗೆ ತೆರಳಿ ಕುಟುಂಬದವರೊಟ್ಟಿಗೆ ಕಾಲ ಕಳೆಯುವಂತೆ ಮಾಡಿದ್ದರೆ ಮತ್ತೆ ಕೆಲವರನ್ನು ಕುಟುಂಬದವರು ಇರುವ ಪ್ರದೇಶದಿಂದ ದೂರವಾಗಿಸಿ ದಿನ ದೂಡುವುದನ್ನೂ ಕಷ್ಟವನ್ನಾಗಿಸಿದೆ. ಭಾರತ ಹಾಕಿ ತಂಡದ ಆಟಗಾರ ಸೂರಜ್ ಕರ್ಕೆರಾ ಅವರೂ ಸಹ ಇದೇ ರೀತಿಯ ಸ್ಥಿತಿ ಎದುರಿಸುತ್ತಿದ್ದಾರೆ. 

ಮುಂಬೈ ನವರಾದ ಕರ್ಕೆರಾ ಅವರು ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ನಲ್ಲಿದ್ದರು ರಾಷ್ಟ್ರೀಯ ತಂಡದಲ್ಲಿ ಅವರ ಸಹ ಕ್ರೀಡಾಪಟುಗಳು ತಮ್ಮ ಊರುಗಳಿಗೆ ತೆರಳಿದ್ದು, ಈಗ ಕ್ಯಾಂಪಸ್ ನಲ್ಲಿ ಕರ್ಕೆರಾ ಮಾತ್ರ ಇದ್ದಾರೆ ಮುಂಬೈ ನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅವರು ಮುಂಬೈ ಗೆ ತೆರಳದೇ ಬೆಂಗಳೂರಿನಲ್ಲೇ ಇದ್ದಾರೆ.

ತಮ್ಮ ಬಿಡುವಿನ ಅವಧಿಯನ್ನು ಹೇಗೆ ಕಳೆಯುತ್ತಾರೆ ಎಂಬ ಬಗ್ಗೆ ಮಾತನಾಡಿದ್ದು, "ಕುಟುಂಬ ಸದಸ್ಯರೊಂದಿಗೆ ಇರದೇ ಇರುವುದು ಬೇಸರ ಮೂಡಿಸುತ್ತದೆ. ಆದರೆ ನನಗೆ ಕುಟುಂಬ ಸದಸ್ಯರ ಆರೋಗ್ಯವಷ್ಟೇ ಮುಖ್ಯ ಎನ್ನುತ್ತಾರೆ ಕರ್ಕೆರಾ

ಈ ನಡುವೆ ನನ್ನ ಕುಟುಂಬ ಸದಸ್ಯರ ಜೊತೆಗಿನ ಸಂವಹನ ಹೆಚ್ಚಾಗಿದೆ. ಅವರ ಆರೋಗ್ಯ, ಮನೆಯಲ್ಲಿನ ಸಂಗತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದೇನೆ. ನಾನು ಏನು ಮಾಡುತ್ತಿದ್ದೇನೆ ಎಂಬುದನ್ನೂ ಅವರಿಗೆ ತಿಳಿಸುತ್ತೇನೆ. 7 ವರ್ಷದ ಲ್ಯಾಬ್ರಡಾರ್ ಡೀನೊ ವನ್ನೂ ವಿಚಾರಿಸಿಕೊಳ್ಳುತ್ತಿರುತ್ತೇನೆ. ಇಷ್ಟೆಲ್ಲದರ ನಡುವೆ  ಪುಸ್ತಕ ಓದುವುದು ಹಾಗೂ ಯುರೋಪಿಯನ್ ಫುಟ್ಬಾಲ್ ಆಕ್ಷನ್ ಆನ್ಲೈನ್ ನ್ನು ವೀಕ್ಷಿಸುವುದಾಗಿಯೂ ಹೇಳಿದ್ದಾರೆ.2017 ರಲ್ಲಿ ಭಾರತ ಹಾಕಿ ತಂಡಕ್ಕೆ ಕರ್ಕೆರಾ ಪದಾರ್ಪಣೆ ಮಾಡಿದ್ದರು.

Stay up to date on all the latest ಕ್ರೀಡೆ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp