ಟೋಕಿಯೋ ಒಲಿಂಪಿಕ್ಸ್ ಮುಂದೂಡುವ ಬಗ್ಗೆ ಜಪಾನ್ ಪ್ರಧಾನಿ ಸುಳಿವು

ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ರೀಡಾಪಟುಗಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಹೇಳಿದ್ದಾರೆ. ಈ ಮೂಲಕ ಕೂಟವನ್ನು ಮುಂದೂಡುವ ಕುರಿತು ಸುಳಿವು ನೀಡಿದ್ದಾರೆ.

Published: 23rd March 2020 12:45 PM  |   Last Updated: 23rd March 2020 12:45 PM   |  A+A-


Shinzo Abe

ಶಿಂಜೊ ಅಬೆ

Posted By : Shilpa D
Source : UNI

ಟೋಕಿಯೊ:  ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ರೀಡಾಪಟುಗಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಹೇಳಿದ್ದಾರೆ. ಈ ಮೂಲಕ ಕೂಟವನ್ನು ಮುಂದೂಡುವ ಕುರಿತು ಸುಳಿವು ನೀಡಿದ್ದಾರೆ.

ಕೊರೊನಾ ವೈರಸ್ ಸೋಂಕು ವಿಶ್ವವನ್ನು ಇನ್ನಿಲ್ಲದಂತೆ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಾಗತಿಕ ಕ್ರೀಡಾಕೂಟಗಳು ಸ್ತಬ್ಧಗೊಂಡಿವೆ. ಇದೀಗ ಪ್ರತಿಷ್ಠಿತ ಒಲಿಂಪಿಕ್ಸ್ ಕೂಟವೂ ಮುಂದೂಡಲ್ಬಡುವ ಸಾಧ್ಯತೆ ಹೆಚ್ಚಾಗಿದೆ.

''ಒಂದು ವೇಳೆ ಕೊರೊನಾ ವೈರಸ್ ಭೀತಿಯಿಂದ ಕ್ರೀಡೆಯನ್ನು ನಡೆಸುವುದು ಕಷ್ಟವಾದರೆ, ನಾವು ಅದನ್ನು ಮುಂದೂಡಲು ನಿರ್ಧರಿಸಬೇಕು, ಕ್ರೀಡಾಪಟುಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ'' ಎಂದು ಅಬೆ ಹೇಳಿರುವ ಹೇಳಿಕೆಯನ್ನು ಕ್ಯೋಡೋ ನ್ಯೂಸ್ ಉಲ್ಲೇಖಿಸಿದೆ.

ಏತನ್ಮಧ್ಯೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಂದಿನ ನಾಲ್ಕು ವಾರಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಮುಂದೂಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp