ಕ್ರೀಡಾಪಟು ಜಯದೀಬನ್ ರಾಮಮೂರ್ತಿಗೆ ಕ್ರೀಡಾ ಸಚಿವರಿಂದ 25 ಸಾವಿರ ರೂ. ಸಹಾಯಧನ

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾಪಟು ಜಯದೀಬನ್ ರಾಮಮೂರ್ತಿ ಅವರಿಗೆ ಕ್ರೀಡಾ ಸಚಿವ ಸಿ.ಟಿ. ರವಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ 25 ಸಾವಿರ ರೂ ಸಹಾಯಧನ ಒದಗಿಸಿದ್ದಾರೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾಪಟು ಜಯದೀಬನ್ ರಾಮಮೂರ್ತಿ ಅವರಿಗೆ ಕ್ರೀಡಾ ಸಚಿವ ಸಿ.ಟಿ. ರವಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ 25 ಸಾವಿರ ರೂ ಸಹಾಯಧನ ಒದಗಿಸಿದ್ದಾರೆ.

ಸಿಟಿ ರವಿ ಅವರು ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ. ಪುರುಷೋತ್ತಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಉಪಸ್ಥಿತರಿದ್ದರು.

ಬೆಂಗಳೂರಿನ ಬೆನ್ಸನ್ ಟೌನ್ ನಿವಾಸಿಯಾದ ಜಯದೀಬನ್ ರಾಮಮೂರ್ತಿ ಅವರು ಜೀವನೋಪಾಯಕ್ಕಾಗಿ ಖಾಸಗಿ ಸಂಸ್ಥೆಯಲ್ಲಿ ತಾತ್ಕಾಲಿಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 

ಲಾಕ್‍ಡೌನ್ ಹಿನ್ನೆಲೆಯಲ್ಲಿ ದೈನಂದಿನ ಅಗತ್ಯತೆಗೆ ಹಣವಿಲ್ಲದೆ ತುಂಬಾ ಕಷ್ಟದಲ್ಲಿದ್ದು, ಅವರ ಕ್ಯಾಲಿಪರ್ಸ್ ಸಹ ಹಾಳಾಗಿ ಸಂಚರಿಸಲು ಕಷ್ಟಸಾಧ್ಯವಾಗಿತ್ತು. ಮಾನವೀಯ ದೃಷ್ಟಿಯಿಂದ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಹಾಯಧನ ನೀಡಲಾಗಿದೆ ಎಂದು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com