ರಾಫೆಲ್ ನಡಾಲ್ ಗೆ 1000 ನೇ ಸಿಂಗಲ್ಸ್ ಗೆಲುವು, ಎಲೈಟ್ ಲಿಸ್ಟ್ ಸೇರಿದ 4ನೇ ಆಟಗಾರ

ಸ್ಪ್ಯಾನಿಷ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ತಮ್ಮ ಟೆನ್ನಿಸ್ ವೃತ್ತಿ ಬದುಕಿನ 1,000ನೇ ಸಿಂಗಲ್ಸ್ ಪಂದ್ಯ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
ರಾಫೆಲ್ ನಡಾಲ್
ರಾಫೆಲ್ ನಡಾಲ್

ಪ್ಯಾರೀಸ್: ಸ್ಪ್ಯಾನಿಷ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ತಮ್ಮ ಟೆನ್ನಿಸ್ ವೃತ್ತಿ ಬದುಕಿನ 1,000ನೇ ಸಿಂಗಲ್ಸ್ ಪಂದ್ಯ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಪ್ಯಾರೀಸ್ ಮಾಸ್ಟರ್ಸ್ ಪಂದ್ಯದಲ್ಲಿ ನಡಾಲ್ ಫೆಲಿಸಿಯಾನೊ ಲೋಪೆಜ್ ವಿರುದ್ಧ 4-6, 7-6 (5), 6-4 ಸೆಟ್‌ಗಳಿಂದ ಜಯ ಗಳಿಸಿದ್ದಾರೆ. ಈ ಗೆಲುವಿನೊಂದಿಗೆ ಅವರು 1,000-ಗೆಲುವಿನ ಕ್ಲಬ್‌ನಲ್ಲಿ ಜಿಮ್ಮಿ ಕಾನರ್ಸ್ (1,274), ರೋಜರ್ ಫೆಡರರ್ (1,242) ಮತ್ತು ಇವಾನ್ ಲೆಂಡ್ಲ್ (1,068) ಅವರುಗಳನ್ನು ಸೇರ್ಪಡೆಯಾದರು.

34ರ ಹರೆಯದ ನಡಾಲ್ ತಮ್ಮ ಈ "ವಿಶೇಷ ಸಾಧನೆ" ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾನು ಹಳೆಯವನಾಗುತ್ತಿದ್ದೇನೆನ್ನಲು ಇದು ಉದಾಹರಣೆಯಾಗಿದೆ ಎಂದಿದ್ದಾರೆ. 

"ಇದರರ್ಥ ನನಗೆ ವಯಸ್ಸಾಗುತ್ತಿದೆ ಇದರರ್ಥ ನಾನು ಇಷ್ಟು ದಿನ ಚೆನ್ನಾಗಿ ಆಡಿದ್ದೇನೆ, ಏಕೆಂದರೆ ಇಷ್ಟು ಸಂಖ್ಯೆಯ ಗೆಲುವು ಸಾಧಿಸಿದ್ದೇನೆ, ನಾನು ಬಹಳ ವರ್ಷಗಳಿಂದ ಉತ್ತಮವಾಗಿ ಆಡುತ್ತಿದ್ದೇನೆ ಮತ್ತಿದು ಮತ್ತು ನನಗೆ ಸಂತೋಷವನ್ನುಂಟು ಮಾಡುವ ಸಂಗತಿಯಾಗಿದೆ, ನನ್ನ ಜೀವನದ ಯಾವುದೇ ಕ್ಷಣದಲ್ಲಿನನಗೆ ಸಹಾಯ ಮಾಡಿದ ನನಗೆ ಮತ್ತು ಎಲ್ಲಾ ಜನರಿಗೆ ತುಂಬಾ ಧನ್ಯವಾದಗಳು" ನಡಾಲ್ ಹೇಳಿದ್ದಾರೆ.

"ಇದು ಒಂದು ವಿಶೇಷ ಕ್ಷಣವಾಗಿದೆ. ನನಗೆ ಗೊತ್ತು ಬಹಳ ವಿಶೇಷವಾದ ಸಂಖ್ಯೆ 1000. ಜನಸಂದಣಿಯಿಲ್ಲದೆ ಈ ರೀತಿ ಮೈದಾನದಲ್ಲಿ ಇಂತಹಾ ವಿಶೇಷ ಸಂಭ್ರಮ ಆಚರಿಸುವುದು ತುಸು ಬೇಸರವಾಗಿದ್ದರೂ ನಾನು ಅದನ್ನು ಎಟಿಪಿ ಯೊಂದಿಗೆ ಆನಂದಿಸುತ್ತೇನೆ, ಫ್ರೆಂಚ್ ಫೆಡರೇಶನ್ ಅಧ್ಯಕ್ಷರೊಂದಿಗೆ ಈ ಸಂಭ್ರಮವನ್ನು ಹಂಚಿಕೊಳ್ಳುತ್ತೇನೆ" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com