ಟೋಕಿಯೊ ಒಲಿಪಿಂಕ್ಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಕೊರೋನಾ ವೈರಸ್ ಲಸಿಕೆ ಕಡ್ಡಾಯವಲ್ಲ: ಐಒಸಿ ಮುಖ್ಯಸ್ಥ 

ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಅಥ್ಲೆಟ್ ಗಳು ಕೊರೋನಾ ವೈರಸ್ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಚಾಂಪಿಯನ್ ಷಿಪ್ ನ ಮುಖ್ಯಸ್ಥ ಥಾಮಸ್ ಬಾಚ್ ತಿಳಿಸಿದ್ದಾರೆ. 
ಮುಂದಿನ ವರ್ಷ ಒಲಿಂಪಿಕ್ಸ್ ನಡೆಯುವ ಗ್ರಾಮವನ್ನು ಪರಿಶೀಲಿಸಿದ ಐಒಸಿ ಅಧ್ಯಕ್ಷ ಥಾಮಸ್ ಬಾಚ್
ಮುಂದಿನ ವರ್ಷ ಒಲಿಂಪಿಕ್ಸ್ ನಡೆಯುವ ಗ್ರಾಮವನ್ನು ಪರಿಶೀಲಿಸಿದ ಐಒಸಿ ಅಧ್ಯಕ್ಷ ಥಾಮಸ್ ಬಾಚ್

ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಅಥ್ಲೆಟ್ ಗಳು ಕೊರೋನಾ ವೈರಸ್ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಚಾಂಪಿಯನ್ ಷಿಪ್ ನ ಮುಖ್ಯಸ್ಥ ಥಾಮಸ್ ಬಾಚ್ ತಿಳಿಸಿದ್ದಾರೆ. 

ಸಾಂಕ್ರಾಮಿಕ ರೋಗ ಇಳಿಮುಖವಾದ ನಂತರ ಅಥ್ಲೆಟ್ ಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮಕ್ಕೆ ಹೆಜ್ಜೆಯಿಟ್ಟಿರುವ ಬಾಚ್, ಅಥ್ಲೆಟ್ಸ್ ಗಳು ಕೊರೋನಾಗೆ ಲಸಿಕೆ ತೆಗೆದುಕೊಳ್ಳುವುದು, ಬಿಡುವುದು ಅವರವರ ತೀರ್ಮಾನಕ್ಕೆ ಬಿಟ್ಟಿದ್ದು ಎಂದಿದ್ದಾರೆ.

ಇಲ್ಲಿ ಹಲವು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ವೈಯಕ್ತಿಕ ಆರೋಗ್ಯದ ವಿಷಯವಿದು, ಪ್ರತಿ ಸ್ಪರ್ಧಿಯ ಆರೋಗ್ಯ ಪರಿಸ್ಥಿತಿಯ ಪ್ರಶ್ನೆಯಾಗಿರುತ್ತದೆ. ಲಭ್ಯತೆಯ ವಿಷಯವಾಗಿರುತ್ತದೆ, ಆದರೂ ಸುರಕ್ಷತೆ ದೃಷ್ಟಿಯಿಂದ ಲಸಿಕೆ ಹಾಕಿಸಿಕೊಂಡರೆ ಉತ್ತಮ ಎಂದರು. 

ಟೋಕಿಯೊದಲ್ಲಿ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ನ್ನು ಒಂದು ವರ್ಷ ಮುಂದೂಡಲಾಗಿದ್ದು ಮುಂದಿನ ವರ್ಷ ಜುಲೈ 23ರಂದು ಆರಂಭವಾಗಿ ಆಗಸ್ಟ್ 8ರಂದು ಮುಗಿಯಲಿದೆ. ಒಲಿಂಪಿಕ್ ಇತಿಹಾಸದಲ್ಲಿಯೇ ಸ್ಪರ್ಧೆಯನ್ನು ಮುಂದೂಡಿದ್ದು ಇದೇ ಮೊದಲು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com