ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಮರಾಡೋನ ನಿಧನ 

Published: 25th November 2020 11:02 PM  |   Last Updated: 25th November 2020 11:02 PM   |  A+A-


Maradona

ಮರಾಡೋನ

Posted By : Srinivas Rao BV
Source : Online Desk

ಬ್ಯೂನಸ್ ಐರಿಸ್: ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಡಿಗೊ ಮರಾಡೋನ ಅವರು ಹೃದಯ ಸ್ತಂಭನಕ್ಕೊಳಗಾಗಿ ಬುಧವಾರ ಸಂಜೆ ನಿಧನರಾಗಿದ್ದಾರೆ

ಕೆಲವೇ ವಾರಗಳ ಹಿಂದಷ್ಟೇ ಮರಡೋನ (60) ಅವರು, ರಕ್ತ ಹೆಪ್ಪುಗಟ್ಟಿದ್ದ ಹಿನ್ನೆಲೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಎರಡು ವಾರಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನ.25 ರಂದು ಸಂಜೆ ಬ್ಯೂನಸ್ ಐರಿಸ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 

ಡಿಗೊ ಮರಡೋನ ಫುಟ್ಬಾಲ್ ದಂತಕಥೆಯೆಂದೇ ಖ್ಯಾತಿ ಪಡೆದಿದ್ದರು. ಅರ್ಜೆಂಟೀನಾದ ಅಧ್ಯಕ್ಷರು ಫುಟ್ಬಾಲ್ ದಂತಕಥೆ ನಿಧನಕ್ಕೆ ಸಂತಾಪ ಸೂಚಿಸಿದ್ದು ರಾಷ್ಟ್ರೀಯ ಶೋಕ ಘೋಷಿಸಿದ್ದಾರೆ. 1986 ರಲ್ಲಿ ಮರಡೋನಾ ನೇತೃತ್ವದ ತಂಡ ಪಶ್ಚಿಮ ಜರ್ಮನಿಯನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು. ಮರಡೋನ ಅವರ ದಿ ಹ್ಯಾಂಡ್ ಆಫ್ ಗಾಡ್ ಎಂದೇ ಕರೆಯಲ್ಪಡುವ ಗೋಲು ಪ್ರಸಿದ್ಧವಾಗಿದೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp