ಒಲಿಂಪಿಕ್ ಶಿಬಿರ ತೊರೆದು ಇಂಗ್ಲೆಂಡ್ ಗೆ ತೆರಳಿದ ಪಿ.ವಿ.ಸಿಂಧೂ

ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧೂ ಒಲಿಂಪಿಕ್ ಗಾಗಿ ನಡೆಯುತ್ತಿರುವ ಶಿಬಿರವನ್ನು ತೊರೆದು ಲಂಡನ್ ಗೆ ತೆರಳಿದ್ದಾರೆ. ಚೇತರಿಕೆಯ ಕೆಲಸಕ್ಕಾಗಿ ಇಂಗ್ಲೆಂಡ್ ಗೆ ತೆರಳಿರುವುದಾಗಿ ಪಿ.ವಿ. ಸಿಂಧೂ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಇನ್ನೂ ಹತ್ತು ದಿನಗಳ ಕಾಲ ಪಿ.ವಿ. ಸಿಂಧೂ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿ.ವಿ. ಸಿಂಧೂ
ಪಿ.ವಿ. ಸಿಂಧೂ

ಲಂಡನ್: ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧೂ ಒಲಿಂಪಿಕ್ ಗಾಗಿ ನಡೆಯುತ್ತಿರುವ ಶಿಬಿರವನ್ನು ತೊರೆದು ಲಂಡನ್ ಗೆ ತೆರಳಿದ್ದಾರೆ. ಚೇತರಿಕೆ ಮತ್ತು ಪುಷ್ಠಿಯ ಕೆಲಸಕ್ಕಾಗಿ ಇಂಗ್ಲೆಂಡ್ ಗೆ ತೆರಳಿರುವುದಾಗಿ ಪಿ. ವಿ. ಸಿಂಧೂ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಇನ್ನೂ ಹತ್ತು ದಿನಗಳ ಕಾಲ ಪಿ. ವಿ. ಸಿಂಧೂ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಲಿಂಪಿಕ್  ಶಿಬಿರವನ್ನು ಸಾಮಾನ್ಯವಾಗಿ ಯಾರೂ ಕೂಡಾ ಮಧ್ಯದಲ್ಲಿಯೇ ತೊರೆದು ಹೋಗವುದಿಲ್ಲ, ಅಲ್ಲದೇ ಇದೇ ಮೊದಲ ಬಾರಿಗೆ ತನ್ನ ಪೋಷಕರಿಲ್ಲದೆ ಪಿ. ವಿ. ಸಿಂಧೂ  ಇಂಗ್ಲೆಂಡ್ ಗೆ ತೆರಳಿದ್ದಾರೆ.

ಗ್ಯಾಟೋರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಯ ರೆಬೆಕಾ ರಾಂಡೆಲ್ ಸೇರಿದಂತೆ ತಜ್ಞರ ತಂಡವು ಆಕೆಯ ಮೇಲೆ ನಿಗಾ ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವದ ಮಾಜಿ ನಂಬರ್ 2 ಆಟಗಾರ್ತಿ ಮುಂದಿನ ಎರಡು ತಿಂಗಳು ಇಂಗ್ಲೆಂಡ್ ನಲ್ಲಿ ಇರುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com