ಭಾರತದ 7 ವರ್ಷಗಳ  ನಿರೀಕ್ಷೆ ಪೂರ್ಣ: ಯುಎಸ್ ಓಪನ್ ಎರಡನೇ ಸುತ್ತು ಪ್ರವೇಶಿಸಿದ ಸುಮಿತ್ ನಗಾಲ್ 

ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಸುಮಿತ್ ನಗಾಲ್  ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಮೂಲಕ 2013ರಿಂದೀಚೆಗೆ ಪ್ರತಿಷ್ಠಿತ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Published: 02nd September 2020 02:33 PM  |   Last Updated: 02nd September 2020 02:33 PM   |  A+A-


ಸುಮಿತ್ ನಗಾಲ್

Posted By : Raghavendra Adiga
Source : PTI

ನವದೆಹಲಿ: ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಸುಮಿತ್ ನಗಾಲ್  ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಮೂಲಕ 2013ರಿಂದೀಚೆಗೆ ಪ್ರತಿಷ್ಠಿತ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಯುಎಸ್ ಓಪನ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿನಗಾಲ್  ಅಮೆರಿಕದ ಬ್ರಾಡ್ಲಿ ಕ್ಲಾನ್ ಅವರನ್ನು  6-1, 6-3, 3-6, 6-1ರ ಅಂತರದಲ್ಲಿ ಪರಾಭವಗೊಳಿಸಿದರು. 

ಈ ಫಲಿತಾಂಶದೊಂದಿಗೆ, 23 ವರ್ಷದ ನಗಾಲ್  ಯುಎಸ್ ಓಪನ್ ಅಥವಾ ಇನ್ನಾವುದೇ  ಗ್ರ್ಯಾಂಡ್ ಸ್ಲ್ಯಾಮ್ ಸ್ಪರ್ಧೆಯಲ್ಲಿ ಏಳು ವರ್ಷಗಳಲ್ಲಿ ಮುಖ್ಯ ಡ್ರಾ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಪುರುಷ ಆಟಗಾರರಾಗಿದ್ದಾರೆ.  ಈ ಹಿಂದೆ 2013 ರಲ್ಲಿ  ಸೋಮದೇವ್ ದೇವರ್ಮನ್ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಎರಡನೇ ಸುತ್ತನ್ನು ತಲುಪಿದ್ದರು.

1 ನೇ ಸುತ್ತಿನ ಪಂದ್ಯದಲ್ಲಿ ಎದುರಾಳಿಯನ್ನು ಮಣಿಸಿದ ಭಾರತೀಯ ಆಟಗಾರ ನಗಾಲ್ ಎರಡನೇ ಸುತ್ತಿನಲ್ಲಿ ಗುರುವಾರ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಎದುರಿಸಲಿದ್ದಾರೆ. ವಿಶೇಷವೆಂದರೆ, ಇದು ನಗಾಲ್  ಅವರ ಸತತ ಎರಡನೇ ಯುಎಸ್ ಓಪನ್ ಮುಖ್ಯ ಡ್ರಾ ಪ್ರದರ್ಶನವಾಗಿದೆ. ಅವರು ಕಳೆದ ವರ್ಷ ಮೊದಲ ಸುತ್ತಿನಲ್ಲಿ 20 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ರೋಜರ್ ಫೆಡರರ್ ವಿರುದ್ಧ ಸೋತಿದ್ದರು. ಫೆಡರರ್ ವಿರುದ್ಧದ ಸೋಲಿನ ಹೊರತಾಗಿಯೂ,  ಸತತ ಪ್ರಯತ್ನಪೂರ್ವಕ ಪ್ರದರ್ಶನದಿಂದ  ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದರು.

Stay up to date on all the latest ಕ್ರೀಡೆ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp