5 ವರ್ಷದ ಬಾಲಕಿಯ ಟೆನಿಸ್ ಸ್ಕಿಲ್ಸ್ ಗೆ ನಡಾಲ್ ಫಿದಾ, ಬಾಲಕಿಗೆ ವಿಶೇಷ ಗಿಫ್ಟ್, ವಿಡಿಯೋ!

ಜಗತ್ತಿನ ಸ್ಟಾರ್ ಟೆನಿಸ್ ತಾರೆ ರಾಫೆಲ್ ನಡಾಲ್ ಐದು ವರ್ಷದ ಬಾಲಕಿಯ ಟೆನಿಸ್ ಸ್ಕಿಲ್ಸ್ ಗೆ ಫಿದಾ ಆಗಿದ್ದಾರೆ. 

Published: 29th September 2020 09:05 PM  |   Last Updated: 29th September 2020 10:28 PM   |  A+A-


Rafael Nadal-Viviktha

ನಡಾಲ್-ವಿವಿಕ್ತಾ

Posted By : Vishwanath S
Source : The New Indian Express

ಜಗತ್ತಿನ ಸ್ಟಾರ್ ಟೆನಿಸ್ ತಾರೆ ರಾಫೆಲ್ ನಡಾಲ್ ಐದು ವರ್ಷದ ಬಾಲಕಿಯ ಟೆನಿಸ್ ಸ್ಕಿಲ್ಸ್ ಗೆ ಫಿದಾ ಆಗಿದ್ದಾರೆ. 

ಕೇರಳದ ತಿರುವನಂತಪುರಂನ ಐದು ವರ್ಷದ ಬಾಲಕಿ ವಿವಿಕ್ತಾ ವಿಸಾಕ್ ಟೆನಿಸ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ನೋಡಿದ ನಡಾಲ್ ಮತ್ತೊಂದು ವಿಡಿಯೋ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ “ಹಲೋ ವಿವಿಕ್ತಾ, ಹೇಗಿದ್ದೀರಾ? ನಿಮ್ಮ ಟೆನಿಸ್‌ ಸ್ಕಿಲ್ಸ್ ನೋಡುವುದು ನನಗೆ ತುಂಬಾ ಇಷ್ಟ. ನೀವು ಕೆಲವು ಉತ್ತಮ ಕೌಶಲ್ಯಗಳನ್ನು ಹೊಂದಿದ್ದೀರಿ ಮತ್ತು ನಿಮಗೆ ಕೇವಲ 5 ವರ್ಷ. ಆದ್ದರಿಂದ ಕಷ್ಟಪಟ್ಟು ಕೆಲಸ ಮಾಡಲು ನಿಮ್ಮನ್ನು ಪ್ರೇರೇಪಿಸಲು ಕಿಯಾ ಮತ್ತು ನಾನು ನಿಮಗೆ ಉಡುಗೊರೆಯನ್ನು ನೀಡಲು ಬಯಸುತ್ತೇನೆ. ನೀವು ಬಹುಮಾನವನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಸುರಕ್ಷಿತವಾಗಿರಿ ಮತ್ತು ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇವೆ ಹೇಳಿದ್ದಾರೆ. 

'ಗೆಟ್ ರಾಫಾ ಮೂವಿಂಗ್' ಅಸೋಸಿಯೇಷನ್‌ನಡಿಯಲ್ಲಿ ಟೆನಿಸ್ ತಾರೆ ರಾಫೆಲ್ ನಡಾಲ್ ಅವರ ಮಾನ್ಯತೆ ಪಡೆದ ಏಕೈಕ ಭಾರತಿಯೇ ವಿವಿಕ್ತ ವಿಶಾಕ್ ಆಗಿದ್ದಾರೆ.

ಕಳೆದ ವಾರ, ವಿವಿಕ್ತಾ ವಿಶಾಖ್ ಅವರ ಅಭ್ಯಾಸ ವೀಡಿಯೊ ವಿಡಿಯೋ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕಿಯಾ ಮೋಟಾರ್ಸ್ ಗ್ಲೋಬಲ್ ಗಮನ ಸೆಳೆದಿತ್ತು.

Stay up to date on all the latest ಕ್ರೀಡೆ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp