ನವದೆಹಲಿ: ಹಾಕಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್ ಆಗಿದ್ದ ಸುರೇಶ್ ಕುಮಾರ್ ಠಾಕೂರ್ (51) ಏ.24 ರಂದು ಕೊರೋನಾ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.
ಹಾಕಿ ಇಂಡಿಯಾ ಈ ಮಾಹಿತಿಯನ್ನು ದೃಢಪಡಿಸಿದೆ. ಮೊಹಾಲಿಯಲ್ಲಿ ಠಾಕೂರ್ ಮೃತಪಟ್ಟಿದ್ದಾರೆ. ಹ್ಯಾಂಬರ್ಗ್ (ಜರ್ಮನಿ)ಯಲ್ಲಿ ನಡೆದಿದ್ದ ನಾಲ್ಕು-ರಾಷ್ಟ್ರಗಳ ಟೂರ್ನಮೆಂಟ್, ಮಲೇಷ್ಯಾದಲ್ಲಿ ನಡೆದ ಅಜ್ಲನ್ ಶಾ ಹಾಕಿ ಟೂರ್ನಮೆಂಟ್ ನಲ್ಲಿ ಅಂಪೈರ್ ಆಗಿದ್ದರು.
2013-14 ರಲ್ಲಿ ನಡೆದ ಹಾಕಿ ಇಂಡಿಯಾ ಲೀಗ್ ನಲ್ಲಿಯೂ ಠಾಕೂರ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುರೇಶ್ ಕುಮಾರ್ ಠಾಕೂರ್ ಪ್ರಸಿದ್ಧ ಅಂಪೈರ್ ಆಗಿದ್ದರು. ಅವರ ಸಾವು ತುಂಬಲಾರದ ನಷ್ಟ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೇಂದ್ರೊ ನಿಂಗೋಂಬಾಮ್ ಸಂತಾಪ ಸೂಚಿಸಿದ್ದಾರೆ.
Advertisement