ಟೋಕಿಯೊ ಒಲಂಪಿಕ್ಸ್: ಎತ್ತರ ಜಿಗಿತ; ಚಿನ್ನ ಮೀರಿಸಿದ ಮಾನವೀಯತೆ

ವಿಶ್ವದ ಯಾವುದೇ ಕ್ರೀಡಾಪಟುವಿನ ದೊಡ್ಡ ಕನಸು ಒಲಂಪಿಕ್ಸ್ ಚಿನ್ನ ಗೆಲ್ಲುವುದು. ಇದನ್ನು ಕ್ರೀಡೆಯಲ್ಲಿ ಅತ್ಯುನ್ನತ ಮಟ್ಟದ ಯಶಸ್ಸು ಎಂದು ಪರಿಗಣಿಸಲಾಗುತ್ತದೆ. ಆದರೆ ಕತಾರ್‌ನ ಕ್ರೀಡಾಪಟು ಮುತಾಜ್...
ಮುತಾಜ್ ಎಸ್ಸಾ ಬಾರ್ಶಿಮ್ - ಜಿಯಾನ್ಮಾರ್ಕೊ ತಂಬ್ರಿx
ಮುತಾಜ್ ಎಸ್ಸಾ ಬಾರ್ಶಿಮ್ - ಜಿಯಾನ್ಮಾರ್ಕೊ ತಂಬ್ರಿx

ಟೋಕಿಯೊ: ವಿಶ್ವದ ಯಾವುದೇ ಕ್ರೀಡಾಪಟುವಿನ ದೊಡ್ಡ ಕನಸು ಒಲಂಪಿಕ್ಸ್ ಚಿನ್ನ ಗೆಲ್ಲುವುದು. ಇದನ್ನು ಕ್ರೀಡೆಯಲ್ಲಿ ಅತ್ಯುನ್ನತ ಮಟ್ಟದ ಯಶಸ್ಸು ಎಂದು ಪರಿಗಣಿಸಲಾಗುತ್ತದೆ. ಆದರೆ ಕತಾರ್‌ನ ಕ್ರೀಡಾಪಟು ಮುತಾಜ್ ಎಸ್ಸಾ ಬಾರ್ಶಿಮ್ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಅವರು ಒಲಂಪಿಕ್ ಚಿನ್ನ ಹಾಗೂ ಮಾನವೀಯ ಗುಣ ವಿಶ್ವದಾದ್ಯಂತ ಕ್ರೀಡಾ ಪ್ರೇಮಿಗಳ ಹೃದಯ ಗೆದ್ದಿದೆ.

ಎತ್ತರ ಜಿಗಿತದ ಫೈನಲ್ ನಲ್ಲಿ ಇಟಲಿಯ ಜಿಯಾನ್ಮಾರ್ಕೊ ತಂಬ್ರಿ ಮತ್ತು ಬಾರ್ಶಿಮ್ ಚಿನ್ನ ಪಡೆದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಎತ್ತರ ಜಿಗಿತದ ಇಂತಹವೊಂದು ಮಾನವೀಯ ಸಂದರ್ಭಕ್ಕೆ ಸಾಕ್ಷಿಯಾಯಿತು. ಬಾರ್ಶಿಮ್ ಮತ್ತು ತಂಬ್ರಿ ಇಬ್ಬರೂ 2.37 ಮೀಟರ್ ಜಿಗಿದು ಒಟ್ಟಿಗೆ ಮೊದಲ ಸ್ಥಾನ ಪಡೆದರು. ಇದರ ನಂತರ, ಸ್ಪರ್ಧೆಯ ಅಧಿಕಾರಿಗಳು ಇಬ್ಬರಿಗೂ ತಲಾ ಮೂರು ಜಿಗಿತಗಳನ್ನು ನೀಡಿದರು. ಈ ಮೂರು ಜಿಗಿತಗಳಲ್ಲಿ ಇಬ್ಬರೂ 2.37 ಮೀಟರ್‌ ಮೀರಲು ಸಾಧ್ಯವಾಗಲಿಲ್ಲ.

ಮೂರು ಹೆಚ್ಚುವರಿ ಜಿಗಿತಗಳ ನಂತರ ವಿಜೇತರನ್ನು ನಿರ್ಧರಿಸದಿದ್ದಾಗ, ಅಧಿಕಾರಿಗಳು ಇನ್ನೊಂದು ಬಾರಿ ಜಿಗಿಯಲು ಕೇಳಿದರು. ಆದರೆ, ಆ ಹೊತ್ತಿಗೆ ಇಟಾಲಿಯನ್ ಕ್ರೀಡಾಪಟು ತಂಬ್ರಿ ಗಾಯಗೊಂಡರು. ಕಾಲಿನ ಗಾಯದಿಂದಾಗಿ ಅವರು ಹಿಂದೆ ಸರಿದರು. ಈಗ ಬಾರ್ಶಿಮ್ ಉತ್ತಮ ಜಂಪ್ ಮಾಡುವ ಮೊದಲೇ ಚಿನ್ನವನ್ನು ತೆಗೆದುಕೊಳ್ಳುವ ಅವಕಾಶವನ್ನು ಹೊಂದಿದ್ದರು.

ಇಟಾಲಿಯನ್ ಕ್ರೀಡಾಪಟುವಿನ ನಿರ್ಗಮನದ ನಂತರ, ಬ್ಯಾರಿಸಮ್ ಅವರು ಸಹ ಹಿಂತೆಗೆದುಕೊಂಡರೆ ಏನಾಗುತ್ತದೆ ಎಂದು ಅಧಿಕಾರಿಯನ್ನು ಕೇಳಿದರು. ಅಧಿಕಾರಿಯು ನಿಯಮ ಪುಸ್ತಕವನ್ನು ಪರಿಶೀಲಿಸಿದ ಬಳಿಕ, ಹೀಗೆ ಆದಲ್ಲಿ ನಾವು ನಿಮ್ಮಿಬ್ಬರಿಗೂ ಚಿನ್ನವನ್ನು ನೀಡಬೇಕಾಗುತ್ತದೆ. ಬಾರ್ಶಿಮ್ ನಂತರ ಕೊನೆಯ ಜಿಗಿತದಿಂದ ಹಿಂದೆ ಸರಿದರು ಮತ್ತು ಅವರಿಗೆ ಮತ್ತು ತಂಬ್ರಿಗೆ ಚಿನ್ನದ ಪದಕ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com