ಟೋಕಿಯೊ:ಸೆಮಿ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 2-1 ಮುನ್ನಡೆ ಸಾಧಿಸದ ಕಾರಣ ಇಂದಿನ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು ಎಂದು ಭಾರತದ ಪುರುಷರ ಹಾಕಿ ತಂಡದ ಕೋಚ್ ಗ್ರಹಾಂ ರೈಡ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಮುಕ್ತಾಯವಾದ ಪುರುಷರ ಹಾಕಿ ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡ ಭಾರತ ತಂಡವನ್ನು 5-2 ಗೋಲುಗಳ ಅಂತರದಿಂದ ಸೋಲಿಸಿದೆ. ನಾಡಿದ್ದು ಗುರುವಾರ ನಡೆಯಲಿರುವ ಫೈನಲ್ ಚಿನ್ನದ ಪದಕದ ಗೆಲುವಿನ ಪಂದ್ಯಕ್ಕೆ ಬೆಲ್ಜಿಯಂ ತಂಡ, ಆಸ್ಟ್ರೇಲಿಯಾ ಮತ್ತು ಜರ್ಮನಿ ಮಧ್ಯೆ ನಡೆಯಲಿರುವ ಸೆಮಿ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರನ್ನು ಎದುರಿಸಲಿದೆ.
ಇಂದಿನ ಸೆಮಿ ಫೈನಲ್ ಗೆಲುವಿಗೆ ಸಾಕಷ್ಟು ಪೂರಕ ವಾತಾವರಣ ನಿರ್ಮಿಸಿದ್ದೆವು. ಬೆಲ್ಜಿಯಂ ಈ ಪಂದ್ಯದಲ್ಲಿ ಬಲಶಾಲಿಯಾಗುತ್ತದೆ ಎಂದು ನಮಗೆ ತಿಳಿದಿತ್ತು. ನಾವು 2-1ರ ಮುನ್ನಡೆ ಕಾಯ್ದುಕೊಳ್ಳಬೇಕಾಗಿತ್ತು, ಆದರೆ ಸಾಧ್ಯವಾಗಲಿಲ್ಲ, ಅದಕ್ಕಾಗಿ ಬೆಲೆ ತೆತ್ತಿದ್ದೇವೆ. ತಂಡದಲ್ಲಿ 11 ಮಂದಿ ಆಟಗಾರರನ್ನು ಇರಿಸಬೇಕಾಗಿತ್ತು. ನಾವೇ ತಪ್ಪು ಮಾಡಿಕೊಂಡೆವು ಎಂದಿದ್ದಾರೆ.
ಹಾಕಿ ಎಂದರೆ ವೇಗವನ್ನು ಪಡೆಯುವುದು ಮತ್ತು ಅದನ್ನು ಉಳಿಸಿಕೊಳ್ಳುವುದು, ಚಿನ್ನದ ಅವಕಾಶವನ್ನು ಕಳೆದುಕೊಂಡಿದ್ದೇವೆ ಇನ್ನು ಮೂರನೆಯ ಸ್ಥಾನಕ್ಕೆ ಬರಲು, ಮೂರನೇ ಅತ್ಯುತ್ತಮ ತಂಡವಾಗಿರಬೇಕು ಹಾಗಾಗಿ ನಾವು ಕಂಚಿನ ಪದಕ ಗೆಲ್ಲಲು ಆಸ್ಟ್ರೇಲಿಯಾ ಅಥವಾ ಜರ್ಮನಿಯನ್ನು ಸೋಲಿಸಬೇಕು.ತಂಡ ಮಾನಸಿಕವಾಗಿ ಸಿದ್ಧವಾಗಲು ಪ್ರಯತ್ನಿಸುತ್ತಿದ್ದೇನೆ. ಕಂಚಿನ ಪದಕಕ್ಕೆ ಕೊರಳೊಡ್ಡಲು ತಯಾರಿ ನಡೆಸಬೇಕು ಎಂದು ಹೇಳಿದರು.
ಗುರುವಾರ ಪಂದ್ಯ: ಕಂಚಿನ ಪದಕಕ್ಕೆ ಪುರುಷರ ಹಾಕಿ ತಂಡ ಗುರುವಾರ ಆಸ್ಟ್ರೇಲಿಯಾ ಅಥವಾ ಜರ್ಮನಿ ಜೊತೆ ಸೆಣಸಲಿದೆ. ಕಳೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಂಚ ಶಕ್ತಿ ಕಡಿಮೆಯಾಗಿದ್ದರಿಂದ ಇಂದು ಬೆಲ್ಜಿಯಂ ತಂಡದ ಕೈ ಮೇಲಾಗಿದೆ. ಇಂದಿನ ಸೆಮಿ ಫೈನಲ್ ನಲ್ಲಿ ಆರಂಭದ ನಾಲ್ಕು ಹಂತಗಳು ಭಾರತದ ಪರವಾಗಿದ್ದವು. ಕೊನೆಯ 15 ನಿಮಿಷ ಶಕ್ತಿ ಕಳೆದುಕೊಂಡಿದ್ದರಿಂದ ಬೆಲ್ಜಿಯಂ ವಿರುದ್ಧ 2-5 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.
Advertisement