ಟೊಕಿಯೊ ಒಲಂಪಿಕ್ಸ್‌​ ಕುಸ್ತಿ: ದಹಿಯಾ ಬಳಿಕ ಸೆಮಿ ಫೈನಲ್ ಪ್ರವೇಶಿಸಿದ ದೀಪಕ್ ಪೂನಿಯಾ

ರವಿ ಕುಮಾರ್​​ ದಹಿಯಾ ಬಳಿಕ ಮತ್ತೊಬ್ಬ ಕುಸ್ತಿಪಟು ದೀಪಕ್​ ಪೂನಿಯಾ ಟೊಕಿಯೊ ಒಲಂಪಿಕ್ಸ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದು, ಇದರಂತೆ ಇಬ್ಬರು ಕುಸ್ತಿಪಟುಗಳು ಭಾರತದ ಪಾಲಿಗೆ ಪದಕದ ಭರವಸೆ ಮೂಡಿಸಿದ್ದಾರೆ.
ದೀಪಕ್ ಪೂನಿಯಾ
ದೀಪಕ್ ಪೂನಿಯಾ

ಟೊಕಿಯೊ: ರವಿ ಕುಮಾರ್​​ ದಹಿಯಾ ಬಳಿಕ ಮತ್ತೊಬ್ಬ ಕುಸ್ತಿಪಟು ದೀಪಕ್​ ಪೂನಿಯಾ ಟೊಕಿಯೊ ಒಲಂಪಿಕ್ಸ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದು, ಇದರಂತೆ ಇಬ್ಬರು ಕುಸ್ತಿಪಟುಗಳು ಭಾರತದ ಪಾಲಿಗೆ ಪದಕದ ಭರವಸೆ ಮೂಡಿಸಿದ್ದಾರೆ.

86 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ನೈಜೀರಿಯಾದ ಎಕೆರೆಕೆಮೆ ಅಜಿಯೋಮೋರ್​ ಅವರನ್ನು ಸೋಲಿಸಿದ ಪೂನಿಯಾ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದರು. ಎಕೆರೆಕೆಮೆ ಅಜಿಯೋಮೋರ್​, ಆಫ್ರಿಕಾದ ಮಾಜಿ ಚಾಂಪಿಯನ್​ ಆಗಿದ್ದಾರೆ.

ಮೊದಲ ಅವಧಿಯನ್ನು 4-1ರಲ್ಲಿ ಮುಗಿಸಿದ ದೀಪಕ್ ಪೂನಿಯಾ 2ನೇ ಹಂತದಲ್ಲಿ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದರು. 12-1 ಅಂಕಗಳಿಂದ ನೈಜೀರಿಯಾದ ಸ್ಪರ್ಧಿಯನ್ನು ಸೋಲಿಸಿ ಕ್ವಾರ್ಟರ್​​ ಫೈನಲ್​ಗೆ ಅರ್ಹತೆ ಪಡೆದರು.

ಇದಕ್ಕೂ ಮೊದಲು ಎರಡು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದ ರವಿ ಕುಮಾರ್ ದಹಿಯಾ 57 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಕೊಲಂಬಿಯಾದ ಸ್ಪರ್ಧಿಯನ್ನು ಸೋಲಿಸಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com