ಟೋಕಿಯೊ ಒಲಂಪಿಕ್ಸ್: ಕ್ವಾರ್ಟರ್ ಫೈನಲ್ಸ್ ನಲ್ಲಿ ಎಡವಿದ ವಿನೇಶ್ ಪೋಗಟ್, ಅನ್ಶು ಹೋರಾಟ ಕೂಡ ಅಂತ್ಯ

ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಕುಸ್ತಿ ವಿಭಾಗದಲ್ಲಿ ಮಹಿಳೆಯರ 53 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ ಗೇರಿದ್ದ ಭಾರತದ ವಿನೇಶ್ ಪೋಗಟ್ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ್ದಾರೆ.
ವಿನೇಶ್ ಪೋಗಟ್
ವಿನೇಶ್ ಪೋಗಟ್
Updated on

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಕುಸ್ತಿ ವಿಭಾಗದಲ್ಲಿ ಮಹಿಳೆಯರ 53 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ ಗೇರಿದ್ದ ಭಾರತದ ವಿನೇಶ್ ಪೋಗಟ್ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ್ದಾರೆ.

ಕ್ರೀಡಾಕೂಟದಲ್ಲಿ ಭಾರತದ ಪದಕದ ಭರವಸೆಯಾಗಿದ್ದ ಕುಸ್ತಿಪಟು ವಿನೇಶಾ ಪೋಗಟ್ ಎಂಟರ ಘಟ್ಟದಲ್ಲೇ ಭಾರಿ ಆಘಾತ ಎದುರಿಸಿದ್ದು, ಮಹಿಳೆಯರ 53 ಕೆ.ಜಿ ಫ್ರೀ-ಸ್ಟೈಲ್ ವಿಭಾಗದಲ್ಲಿ ಬೆಲರೂಸ್‌ನ ವೆನೆಸಾ ಕಾಲಜಿನ್‌ಸ್ಕಾಯಾ ವಿರುದ್ಧ ಸೋಲು ಕಂಡಿದ್ದಾರೆ. ಈ ಸೋಲಿನೊಂದಿಗೆ ಭಾರತದ ಮತ್ತೊಂದು ಪದಕದ ಆಸೆ ಕಮರಿದೆ.

ಈ ಹಿಂದೆ ಉಕ್ರೇನ್‌ನಲ್ಲಿ ಇದೇ ವಿನೀಶ್ ಪೋಗಟ್ ವಿರುದ್ಧ ಸೋಲು ಕಂಡಿದ್ದ ಯುರೋಪಿನ ಚಾಂಪಿಯನ್ ಕುಸ್ತಿಪಟು ಬೆಲರೂಸ್‌ನ ವೆನೆಸಾ ಕಾಲಜಿನ್‌ಸ್ಕಾಯಾ ಈ ಪಂದ್ಯ ಗೆದ್ದು ತಮ್ಮ ಹಳೆಯ ಸೇಡು ತೀರಿಸಿಕೊಂಡಿದ್ದಾರೆ.

ಅದೃಷ್ಟ ಒಲಿದರೆ ಕಂಚಿಗಾಗಿ ಮತ್ತೆ ವಿನೀಶ್ ಪೋಗಟ್ ಹೋರಾಟ
ಈ ಮೊದಲು ಪೋಗಟ್, ಪ್ರೀ-ಕ್ವಾರ್ಟರ್‌ನಲ್ಲಿ ಸ್ವೀಡನ್‌ನ ಸೋಫಿಯಾ ಮಾಟ್ಸನ್ ವಿರುದ್ಧ 7-1ರಲ್ಲಿ ಗೆಲುವು ದಾಖಲಿಸಿದ್ದರು. ಒಂದು ವೇಳೆ ಎದುರಾಳಿ ವೆನೆಸಾ ಫೈನಲ್‌ಗೆ ಪ್ರವೇಶಿಸಿದ್ದಲ್ಲಿ ಪೋಗಟ್‌ ಪದಕದ ಆಸೆ ಮತ್ತೊಮ್ಮೆ ಚಿಗುರೊಡೆಯಲಿದೆ. ಅಲ್ಲದೆ ಕಂಚಿನ ಪದಕಕ್ಕಾಗಿ ರಿಪೇಚ್ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಲಭ್ಯವಾಗಲಿದೆ.

ಅನ್ಶು ಹೋರಾಟ ಅಂತ್ಯ
ಏತನ್ಮಧ್ಯೆ ಮಹಿಳೆಯರ 57 ಕೆ.ಜಿ ರಿಪೇಚ್ ಸುತ್ತಿನಲ್ಲಿ ರಷ್ಯಾದ ವಲೆರಿಯಾ ಕೊಬ್ಲೊವಾ ವಿರುದ್ಧ ಸೋಲು ಅನುಭವಿಸಿರುವ 19 ವರ್ಷದ ಅನ್ಶು ಮಲಿಕ್ ಹೋರಾಟ ಅಂತ್ಯಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com