ಟೋಕಿಯೊ ಒಲಂಪಿಕ್ಸ್: ಮಹಿಳೆಯರ ರೆಸ್ಲಿಂಗ್ ನಲ್ಲಿ ವಿನೇಶ್ ಪೋಗಟ್ ಗೆ ಭರ್ಜರಿ ಜಯ, ಕ್ವಾರ್ಟರ್‌ ಫೈನಲ್‌ ಗೆ ಪ್ರವೇಶ

ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಪೋಗಟ್ ಗುರುವಾರ ಮತ್ತೊಂದು ಜಯ ದಾಖಲಿಸಿದ್ದು, ಮಹಿಳೆಯರ  53 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. 
ವಿನೇಶ್ ಪೋಗಟ್ ಗೆ ಜಯ
ವಿನೇಶ್ ಪೋಗಟ್ ಗೆ ಜಯ
Updated on

ಟೋಕಿಯೊ: ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಪೋಗಟ್ ಗುರುವಾರ ಮತ್ತೊಂದು ಜಯ ದಾಖಲಿಸಿದ್ದು, ಮಹಿಳೆಯರ  53 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. 

ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ 7-1ರ ಅಂತರದಲ್ಲಿ ಪೋಗಟ್‌ ಅವರು ಸೋಫಿಯಾ ಪ್ಯಾಟಿನ್ಸನ್‌ ವಿರುದ್ಧ ಜಯ ಸಾಧಿಸಿದರು. ಆ ಮೂಲಕ ಕ್ರೀಡಾಕೂಟದಲ್ಲಿ ವಿನೇಶ್ ಪೋಗಟ್ ಕ್ವಾರ್ಟರ್‌ಫೈನಲ್‌ ಹಂತಕ್ಕೆ ಪ್ರವೇಶಿಸಿದ್ದಾರೆ.

ಇನ್ನು ಈ ಪಂದ್ಯದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿನೇಶ್ ಫೋಗಟ್ ಅವರ ತಾಯಿ ಪ್ರೇಮಲತಾ ಅವರು, '"ಈ ಪಂದ್ಯದಲ್ಲಿ ವಿನೇಶ್ ಗೆದ್ದಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಅವಳು ಚೆನ್ನಾಗಿ ಆಡಿದ್ದಳು. ನನಗೆ ಸಂತೋಷವಾಗಿದೆ’ ಎಂದು ಹರಿಯಾಣದ ಬಾಲಾಲಿಯಲ್ಲಿ ತಾಯಿ  ಪ್ರೇಮಲತಾ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com