ಐ-ಲೀಗ್ ಮೇಲೆ ಕೋವಿಡ್-19 ಕರಿನೆರಳು; 7ಕ್ಕೂ ಹೆಚ್ಚು ಆಟಗಾರರಿಗೆ ಸೋಂಕು ದೃಢ

ಪುರುಷರ ಫುಟ್ಬಾಲ್ ಪಂದ್ಯಾವಳಿಗಳ ಐ-ಲೀಗ್ ಮೇಲೆ ಕೋವಿಡ್-19 ಕರಿನೆರಳು ಆವರಿಸಿದ್ದು ಬಯೋಬಬಲ್ ನಲ್ಲಿರುವ ತಂಡಗಳ ಪೈಕಿ ಆಟಗಾರರಿಗೆ ಸೋಂಕು ತಗುಲಿದೆ. 
ಐ -ಲೀಗ್
ಐ -ಲೀಗ್

ಕೋಲ್ಕತ್ತ: ಪುರುಷರ ಫುಟ್ಬಾಲ್ ಪಂದ್ಯಾವಳಿಗಳ ಐ-ಲೀಗ್ ಮೇಲೆ ಕೋವಿಡ್-19 ಕರಿನೆರಳು ಆವರಿಸಿದ್ದು ಬಯೋಬಬಲ್ ನಲ್ಲಿರುವ ತಂಡಗಳ ಪೈಕಿ ಆಟಗಾರರಿಗೆ ಸೋಂಕು ತಗುಲಿದೆ. 

10 ಕ್ಕೂ ಹೆಚ್ಚು ಮಂದಿಯಲ್ಲಿ ಇತ್ತೀಚಿನ 7 ಆಟಗಾರರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

ರಿಯಲ್ ಕಾಶ್ಮೀರ್ ಎಫ್ ಸಿಯ ಐವರು ಮಂದಿ ಆಟಗಾರರು ಹಾಗೂ ಮೊಹಮ್ಮದನ್ ಸ್ಪೋರ್ಟಿಂಗ್ ಹಾಗೂ ಡೆಬ್ಯುಟೆಂಟ್ಸ್ ಶ್ರೀನಿಧಿ ಡೆಕನ್ ಎಫ್ ಸಿ ಗೆ ಸೋಂಕು ತಗುಲಿದೆ ಎಂದು ಲೀಗ್ ನ ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ತುರ್ತಾಗಿ ಲೀಗ್ ಸಮಿತಿ ಸಭೆಯನ್ನು ಕರೆಯಲಾಗಿದ್ದು, ಲೀಗ್ ನ್ನು ಮುಂದುವರೆಸುವುದೋ ಬೇಡವೋ ಎಂಬ ಬಗ್ಗೆ ಡಿ.26 ರಂದು ನಿರ್ಧಾರ ಕೈಗೊಳ್ಳಲಾಗುತ್ತದೆ. 

ಐ-ಲೀಗ್ ನ್ನು ಸ್ಥಗಿತಗೊಳಿಸಲಾಗಿಲ್ಲ. ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com